ಜೇಟ್ಲಿ ಮಾನನಷ್ಟ ಮೊಕದ್ದಮೆ: ಆಪ್ ನಾಯಕನ ಅರ್ಜಿ ವಜಾ
ಜೊಸದಿಲ್ಲಿ,ಫೆ.8: ವಿತ್ತಸಚಿವ ಅರುಣ್ ಜೇಟ್ಲಿಯವರು ತನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ತಿರಸ್ಕರಿಸುವಂತೆ ಕೋರಿ ಆಪ್ ವಕ್ತಾರ ದೀಪಕ್ ಬಾಜಪೈ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವಾಗೊಳಿಸಿದೆ.
ಜೇಟ್ಲಿಯವರ ದೂರಿನಲ್ಲಿ ತನ್ನ ವಿರುದ್ಧ ಯಾವುದೇ ದೃಢವಾದ ಆರೋಪವಿಲ್ಲ, ಆದ್ದರಿಂದ ಪ್ರತಿವಾದಿಯಾಗಿ ತನ್ನ ಹೆಸರನ್ನು ತೆಗೆದುಹಾಕುವಂತೆ ಬಾಜಪೈ ಅರ್ಜಿಯಲ್ಲಿ ವಾದಿಸಿದ್ದರು.
1999-2013 ಅವಧಿಯಲ್ಲಿ ತಾನು ಅಧ್ಯಕ್ಷನಾಗಿದ್ದಾಗ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ(ಡಿಡಿಸಿಎ)ದಲ್ಲಿ ಹಣಕಾಸು ಅಕ್ರಮಗಳು ನಡೆದಿದ್ದವು ಎಂದು ಆರೋಪಿಸಿ ತನ್ನ ವಿರುದ್ಧ ದಾಳಿಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಜೇಟ್ಲಿ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಬಾಜಪೈ ಸೇರಿದಂತೆ ಇತರ ಐವರು ಆಪ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
Next Story





