ಉತ್ತರ ಕೊರಿಯದ ನೌಕೆಯತ್ತ ದಕ್ಷಿಣದಿಂದ ಗುಂಡು
ಸಿಯೋಲ್, ಫೆ. 8: ತನ್ನ ಸಾಗರ ಪ್ರದೇಶವನ್ನು ಅತಿಕ್ರಮಿಸಿದ ಉತ್ತರ ಕೊರಿಯದ ಗಸ್ತು ನೌಕೆಯೊಂದರತ್ತ ದಕ್ಷಿಣ ಕೊರಿಯದ ನೌಕಾಪಡೆಯು ಸೋಮವಾರ ಎಚ್ಚರಿಕೆ ಗುಂಡುಗಳನ್ನು ಹಾರಿಸಿದೆ.
ದೀರ್ಘ ವ್ಯಾಪ್ತಿ ರಾಕೆಟೊಂದನ್ನು ಉತ್ತರ ಕೊರಿಯ ಹಾರಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಸ್ಥಳೀಯ ಸಮಯ ಬೆಳಗ್ಗೆ 7 ಗಂಟೆಗೆ ಉತ್ತರ ಕೊರಿಯ ನೌಕೆ ಹಳದಿ ಸಮುದ್ರ ಗಡಿಯನ್ನು ದಾಟಿತು ಎಂದು ದಕ್ಷಿಣ ಕೊರಿಯದ ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





