200 ವರ್ಷಗಳಲ್ಲಿ ಪ್ರಭಾವಿ ಮಹಿಳೆ ಮಾರ್ಗರೆಟ್ ಥ್ಯಾಚರ್: ಬ್ರಿಟಿಷರ ಸಮೀಕ್ಷೆ

ಲಂಡನ್, ಫೆ. 8: ಬ್ರಿಟನ್‌ನ ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಕಳೆದ 200 ವರ್ಷಗಳಲ್ಲೇ ಅತ್ಯಂತ ಪ್ರಭಾವಿ ಮಹಿಳೆ ಎಂಬುದಾಗಿ ಸಮೀಕ್ಷೆಯೊಂದರಲ್ಲಿ ಬ್ರಿಟನ್ ಜನರು ಅಭಿಪ್ರಾಯಪಟ್ಟಿದ್ದಾರೆ.
ಥ್ಯಾಚರ್ ಬ್ರಿಟನ್‌ನ ಮೊದಲ ಹಾಗೂ ಈವರೆಗಿನ ಏಕೈಕ ಮಹಿಳಾ ಪ್ರಧಾನಿಯಾಗಿದ್ದಾರೆ.
ಅವರು ತನ್ನ ಕನ್ಸರ್ವೇಟಿವ್ ಪಕ್ಷವನ್ನು ನಿರಂತರ ಮೂರು ಬಾರಿ ಚುನಾವಣೆಯ ಮೂಲಕ ಅಧಿಕಾರಕ್ಕೆ ತಂದರು ಹಾಗೂ 1979ರಿಂದ 1990ರವರೆಗೆ ಬ್ರಿಟನನ್ನು ಆಳಿದರು. ಇದು 150 ವರ್ಷಗಳ ಅವಧಿಯಲ್ಲಿ ಬ್ರಿಟಿಶ್ ಪ್ರಧಾನಿಯೊಬ್ಬರ ಅತ್ಯಂತ ಸುದೀರ್ಘ ನಿರಂತರ ಅಧಿಕಾರಾವಧಿಯಾಗಿದೆ. ಅವರು 2013 ಎಪ್ರಿಲ್‌ನಲ್ಲಿ ನಿಧನರಾದರು.
ಥ್ಯಾಚರ್ ಶೇ.28 ಮತಗಳನ್ನು ಪಡೆದರೆ, ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ವಿಜ್ಞಾನಿ ಮೇರಿ ಕ್ಯೂರಿ ಎರಡನೆ ಸ್ಥಾನ ಪಡೆದರು. ಮೂರನೆ ಸ್ಥಾನದಲ್ಲಿ 18 ಶೇ. ಮತ ಪಡೆದ ಬ್ರಿಟನ್ ರಾಣಿ ಬಂದರೆ, ನಾಲ್ಕನೆ ಸ್ಥಾನವನ್ನು 17 ಶೇ. ಮತಗಳೊಂದಿಗೆ ವೇಲ್ಸ್ ರಾಜಕುಮಾರಿ ಡಯಾನಾ ಪಡೆದರು.
Next Story





