Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಮಹಾಭಾರತದ ಇನ್ನೊಂದು ಹೊಸ ಓದು

ಮಹಾಭಾರತದ ಇನ್ನೊಂದು ಹೊಸ ಓದು

ಕಾರುಣ್ಯಕಾರುಣ್ಯ8 Feb 2016 11:57 PM IST
share
ಮಹಾಭಾರತದ ಇನ್ನೊಂದು ಹೊಸ ಓದು

ಮಹಾಭಾರತ ಕಾವ್ಯ ಮೊಗೆದಷ್ಟೂ ಉಕ್ಕುವ ಸಾಗರ. ಪ್ರಾಚೀನ ಕವಿಗಳಿಂದ ಹಿಡಿದು ಆಧುನಿಕ ಕವಿ, ಕತೆಗಾರರವರೆಗೆ ಮಹಾಭಾರತವನ್ನು ಮತ್ತೆ ಮತ್ತೆ ಬರೆಯಲಾಗಿದೆ. ಅವರವರ ಬೊಗಸೆಗೆ ದಕ್ಕಿದ ಮಹಾಭಾರತವನ್ನು ಮತ್ತೆ ಮತ್ತೆ ಮರು ವ್ಯಾಖ್ಯಾನಿಸುತ್ತಲೇ ಬಂದಿದ್ದಾರೆ. ಕವಿಗಳು, ಕತೆಗಾರರಲ್ಲದೆ ಸಂಶೋಧಕರೂ ಮಹಾಭಾರತವನ್ನು ಒಂದು ಐತಿಹ್ಯವಾಗಿ ಕಂಡು, ಅದರ ಒಳಹೊರಗನ್ನು ವಿಶ್ಲೇಷಿಸಿದ್ದಾರೆ. ಇರಾವತಿ ಕರ್ವೆಯ ‘ಯುಗಾಂತ’ ಈ ನಿಟ್ಟಿನಲ್ಲಿ ಮಹಾಭಾರತ ಪಾತ್ರ ವಿಶ್ಲೇಷಣೆಯಲ್ಲಿ ಅಪರೂಪದ ಕೃತಿ. ಕನ್ನಡದಲ್ಲಿಯೂ ಮಹಾಭಾರತವನ್ನು ಹಿನ್ನೆಲೆಯಾಗಿಟ್ಟು ಹಲವು ಕವಿಗಳು, ಕತೆಗಾರರು, ಕಾದಂಬರಿಕಾರರು ಬರೆದಿದ್ದಾರೆ. ಎಸ್. ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿ ಈ ನಿಟ್ಟಿನಲ್ಲಿ ಒಂದು ಅಪರೂಪದ ಕೃತಿಯಾಗಿದೆ.

ಪುರಾಣವನ್ನು, ಮನುಷ್ಯಲೋಕದಲ್ಲಿಟ್ಟು ನೋಡಿದ ಕಾದಂಬರಿ ಅದು. ಕಂನಾಡಿಗಾ ನಾರಾಯಣ ಅವರು ಬರೆದಿರುವ ‘ದ್ವಾಪರ’ ಈ ನಿಟ್ಟಿನಲ್ಲಿ ಇನ್ನೊಂದು ಪ್ರಯತ್ನ. ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ ಎಂದು ಅವರೇ ಇಲ್ಲಿ ಹೇಳಿಕೊಂಡಿದ್ದಾರೆ. ವಿವಿಧ ಸಂದರ್ಭ, ಸನ್ನಿವೇಶಗಳನ್ನು ಆಯಾ ಪಾತ್ರಗಳು ಮನೋವೈಜ್ಞಾನಿಕವೆನ್ನುವಂತೆ ವಿಶ್ಲೇಷಿಸುತ್ತ, ತಮ್ಮ ತಮ್ಮ ಅಂತರಂಗದ ತುಮುಲಗಳನ್ನು ಶೋಧಿಸಿಕೊಳ್ಳುತ್ತಲೇ, ವಾಸ್ತವವನ್ನು ಉಧ್ವಸ್ತಗೊಳಿಸುತ್ತ, ವೈಚಾರಿಕ ವೈಜ್ಞಾನಿಕವಾಗಿ ವರ್ತಮಾನದ ಒರೆಗಲ್ಲಿಗೆ ಹಚ್ಚುತ್ತಾ, ಮಿಥ್‌ಗಳನ್ನು ಒಂದೊಂದಾಗಿ ಒಡೆಯುತ್ತಾ ಸಾಗುತ್ತದೆ ಈ ಕೃತಿ. ಇದು ಆಯಾ ಪಾತ್ರಗಳ ಸ್ವಗತ ಎಂದರೆ ಚೆನ್ನ. ಪಾತ್ರ ವಿಶ್ಲೇಷಣೆಗಳಲ್ಲಿ ಲೇಖಕರು ತೀರ ಆಳವಾಗಿ ಮತ್ತು ಸಂಶೋಧನಾತ್ಮಕವಾಗಿ ಇಳಿಯುವುದಿಲ್ಲವಾದರೂ, ಆಯಾ ಪಾತ್ರಗಳ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗುತ್ತಾರೆ. ಮಹಾಭಾರತದ ಕಾಲಘಟ್ಟವನ್ನು ವಿಜ್ಞಾನದ ಮತ್ತು ವೈಚಾರಿಕ ಕಣ್ಣಲ್ಲಿ ನೋಡುವುದರ ಅಪಾಯವನ್ನು ಒಳಗಿಟ್ಟುಕೊಂಡು ಈ ಕೃತಿಯನ್ನು ನಾವು ನಮ್ಮದಾಗಿಸಲು ಪ್ರಯತ್ನಿಸಿದರೆ, ಮಹಾಭಾರತದ ಇನ್ನೊಂದು ಹೊಸ ಓದು ನಮಗೆ ದಕ್ಕುವುದರಲ್ಲಿ ಸಂಶಯವಿಲ್ಲ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 250 ರೂ. ಆಸಕ್ತರು 080-22203580 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯ
ಕಾರುಣ್ಯ
Next Story
X