ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲಾ ನಿಧನ

ಹೊಸದಿಲ್ಲಿ, ಫೆ.8: ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲಾ (76) ಮಂಗಳವಾರ ತನ್ನ ನಿವಾಸ ಮಹಾರಾಜಗುಂಜದಲ್ಲಿ ನಿಧನರಾದರು.
2014 , ಫೆಬ್ರವರಿ 10ರಂದು ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಕೊಯಿರಾಲಾ ಸುಮಾರು ಎಂಟು ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದರು.
1939 ಅಗಸ್ಟ್ 12 ರಂದು ಬನಾರಸ್‌ನಲ್ಲಿ ಜನಿಸಿದ್ದ ಕೊಯಿರಾಲಾ 1954ರಲ್ಲಿ ರಾಜಕೀಯ ಪ್ರವೇಶಿಸಿದ್ದರು.
ಕೊಯಿರಾಲಾ ಅವರು ಮಾಜಿ ಪ್ರಧಾನಿಗಳಾದ ಮಾತ್ರಿಕಾ ಪ್ರಸಾದ್ ಕೊಯಿರಾಲಾ, ಗಿರಿಜಾ ಪ್ರಸಾದ್ ಕೊಯಿರಾಲಾ ಮತ್ತು ಬಿಶ್ವೇಶ್ವರ್ ಪ್ರಸಾದ್ ಕೊಯಿರಾಲಾ ಅವರ ಸಂಬಂಧಿಯಾಗಿದ್ದಾರೆ.
1973ರಲ್ಲಿ ವಿಮಾನ ಹೈಜಾಕ್ ಪ್ರಕರಣದಲ್ಲಿ ಭಾಗಿಯಾಗಿದ್ದ ಕೊಯಿರಾಲಾ ಮೂರು ವರ್ಷಗಳ ಕಾಲ ಭಾರತದ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು.
ಸುಶೀಲ್ ಕೊಯಿರಾಲಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





