ಸೊರಕೆಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ: ಜಯಂತ ಕುಮಾರ್

ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಕಾಪು ಶಾಸಕರು ಇತ್ತೀಚೆಗೆ ಯುಪಿಸಿಎಲ್ ಕಂಪೆನಿಯು ತನ್ನ ಗಮನಕ್ಕೆ ಬರದಂತೆ ನೋಡಿಕೊಂಡು ತನ್ನ ವಿಸ್ತರಣಾ ಘಟಕ 1600 ಮೆ.ವ್ಯಾ.ಗೆ ವಿಸ್ತರಿಸಲು ಹುನ್ನಾರ ನಡೆಸುತ್ತಿದೆ. ವಿಸ್ತರಣಾ ವಿಷಯವಾಗಿ ತೀವ್ರ ವಿರೋಧವಿದೆ. ಇದಕ್ಕೆ ಸಂಬಂಧಿಸಿದಂತೆ ಜನವರಿ ತಿಂಗಳಲ್ಲಿ ಜನರನ್ನು ಒಗ್ಗೂಡಿಸಿ ದೊಡ್ಡ ಪ್ರಮಾಣದ ಪ್ರತಿಭಟನೆ ಮಾಡುತ್ತೇನೆ ಎಂದು ಮಾದ್ಯಮಗಳಲ್ಲಿ ಹೇಳಿದ್ದು, ತಮಗೆಲ್ಲರಿಗೂ ಗೊತ್ತಿದ್ದ ವಿಷಯ. ಇದೀಗ ಜನವರಿ ಕಳೆದು ಫೆಬ್ರವರಿ ತಿಂಗಳು ಬಂದರೂ ಯುಪಿಸಿಎಲ್ ಬಗ್ಗೆ ಮಾತನಾಡದಿದ್ದುದು ಅವರ ಎಡಬಿಡಂಗಿತನ ಜಗಜ್ಜಾಹೀರಾಗಿರುವ ವಿಷಯವಾಗಿರುತ್ತದೆ ಎಂದು ಎಲ್ಲೂರು ಗ್ರಾ.ಪಂ. ಉಪಾಧ್ಯಕ್ಷ ಜಯಂತ ಕುಮಾರ್ ತಿಳಿಸಿದ್ದಾರೆ.
ಒಂದು ಕಡೆ ಯುಪಿಸಿಎಲ್ ಕಂಪೆನಿಯನ್ನು ವಿರೋಧಿಸುವುದು. ಇನ್ನೊಂದು ಕಡೆ ರಾಜ್ಯ ಸರಕಾರ ಇತ್ತೀಚೆಗೆ ಸಂಘಟಿಸಿದ ಇನ್ವೆಸ್ಟ್ ಕರ್ನಾಟಕ ಎಂಬ ಕಾರ್ಯಕ್ರಮದಲ್ಲಿ ಯುಪಿಸಿಎಲ್ ಯಜಮಾನ ಗೌತಮ್ ಅದಾನಿಯ ಜೊತೆ ವೇದಿಕೆ ಹಂಚಿಕೊಂಡದ್ದು ಉಸ್ತುವಾರಿ ಸಚಿವರ ಶಿಷ್ಯ, ಪ್ರಸ್ತುತ ಬೆಳಪು ಪಂಚಾಯತ್ ಅಧ್ಯಕ್ಷರಿಗೆ ಕಾಣದಾಯಿತೇ. ಪ್ರಧಾನ ಆಹ್ವಾನಿತ ಗೌತಮ ಅದಾನಿಯವರು ರಾಜ್ಯದ ಮುಖ್ಯಮಂತ್ರಿಗಳ ಬಳಿಯೇ ಸುತ್ತಾಡುತ್ತಿದ್ದುದು ಕಂಡಿಲ್ಲವೇ. ಅಲ್ಲದೇ ಬೆಳಪು ಪಂಚಾಯತ್ ಅಧ್ಯಕ್ಷ ಹಾಗೂ ಉಸ್ತುವಾರಿ ಸಚಿವರ ಶಿಷ್ಯರು ಇತ್ತೀಚೆಗೆ ಮಾದ್ಯಮದಲ್ಲಿ ಯುಪಿಸಿಎಲ್ ತನ್ನ ವಿಸ್ತರಣಾ ಘಟಕದಲ್ಲಿ ಜಾಗ ಕಳೆದುಕೊಳ್ಳುವವರ (ಸಂತ್ರಸ್ತರ) ಸಭೆಯನ್ನು ಜಿಲ್ಲಾಧಿಕಾರಿಗಳು ಕರೆದಾಗ ನಾನು ಸಭೆಯನ್ನು ನಡೆಸಲು ಬಿಡುವುದಿಲ್ಲ ಎಂದು 1 ವಾರದ ಮುಂಚೆಯೇ ಕೊಟ್ಟ ಬೊಗಳೆ ಹೇಳಿಕೆಯನ್ನು ಮರೆತು ಜಿಲ್ಲಾಧಿಕಾರಿ ಕರೆದ ಸಭೆಗೆ ಯುಪಿಸಿಎಲ್ ವಕ್ತಾರನಾಗಿ ಕಾಣಿಸಿಕೊಂಡಿದ್ದು ಇನ್ನೊಂದು ಎಡಬಿಡಂಗಿತನವಾಗಿದೆ ಎಂದರು.
ಉಸ್ತುವಾರಿ ಸಚಿವರು ಮತ್ತು ಅವರ ಶಿಷ್ಯನ ಎಡೆಬಿಡಂಗಿತನ ಇನ್ನೆಷ್ಟು ದಿನ ಇದೆಯೆಂದು ನಮಗರಿಯದಾಗಿದೆ. ಇದೆಲ್ಲ ಇದ್ದು ಇನ್ನೊಂದು ರಾಷ್ಟ್ರೀಯ ಪಕ್ಷದ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾದ್ಯಮಗಳಲ್ಲಿ ಬಿಂಬಿಸಲು ನೋಡಿದರೇ ಜನರೇ ಇದಕ್ಕೆ ತಕ್ಕ ಉತ್ತರ ನೀಡಲು ತಯಾರಾಗಿದ್ದಾರೆಂದು ಗಮನಕ್ಕೆ ತರಲು ಇಚ್ಚಿಸುತ್ತೇನೆ. ಬೆಳಪು ಅಧ್ಯಕ್ಷರು ತಾನು ದೊಡ್ಡ ಹೋರಾಟಗಾರನೆಂದು ಮಾದ್ಯಮಗಳಲ್ಲಿ ಬಿಂಬಿಸುವುದರ ಜೊತೆಗೆ ಮಾದ್ಯಮದ ಹುಲಿ ಎಂದು ಕರೆಸಲ್ಪಡುವವರಾಗಿರುತ್ತಾರೆ.
ಹೀಗಿದ್ದು ನಿಜವಾದ ಹೋರಾಟಗಾರರನ್ನು ನಿಂದಿಸುವ ಚಾಳಿಯನ್ನು ಇನ್ನಾದರೂ ನಿಲ್ಲಿಸಲಿ ಎಂದು ತಿಳಿಸಿದ್ದಾರೆ.
ಅಲ್ಲದೇ ನಮ್ಮ ನಂದಿಕೂರು ಜನಜಾಗೃತಿ ಸಮಿತಿಯವರು ಹೋರಾಟ ಮಾಡಿ ಜನರಿಗೆ ಸಂತ್ರಸ್ತರಿಗೆ ಬೆನ್ನೆಲುಬಾಗಿ ನಿಂತಿದ್ದು, ಈ ಕಂಪೆನಿಯ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುವುದು ಅಲ್ಲದೇ ಜನರಿಗೆ ಸೂಕ್ತ ಪರಿಹಾರ ಸಿಗುವಂತೆ ಮಾಡಿದ ಜನಜಾಗೃತಿ ಸಮಿತಿಯವರನ್ನು ಈ ಹಿಂದೆ ಬಿಡದೇ ಮಾದ್ಯಮಗಳಲ್ಲಿ ಮಯಿ ಹೀನನಾಗಿ ನಿಂದಿಸಿದ್ದುದು ನಾವು ಮರೆತಿಲ್ಲ. ನಂದಿಕೂರು ಜನ ಜಾಗೃತಿ ಹೋರಾಟದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಬಂದು ವೇದಿಕೆಯ ಬೊಗಳೆ ಬಿಟ್ಟು, ನಂತರ ಹೋರಾಟವು ಉಗ್ರ ರೂಪ ಪಡೆದಾಗ ಈ ಬೆಳಪು ಪಂ. ಅಧ್ಯಕ್ಷರು ಮಂಗ ಮಾಯವಾಗುವುದು ಜಗಜ್ಜಾಹೀರಾಗಿರುವ ವಿಷಯವಾಗಿರುತ್ತದೆ.
ಬೆಳಪು ಪಂ. ಅಧ್ಯಕ್ಷ ಯುಪಿಸಿಎಲ್ ಕಂಪೆನಿಯ ಬಗ್ಗೆ ನಮ್ಮ ತೀವ್ರ ಹೋರಾಟ ಇದೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾತು ಮುಂದುವರೆಸಿ ನಮ್ಮ ಸಂಸದೆಯವರಿಗೆ ಮತ್ತು ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯವರು ಹೋರಾಟದ ನಾಯಕತ್ವ ವಹಿಸಲಿ ಎಂದು ಸವಾಲು ಹಾಕಿರುವುದು ನೋಡಿದರೆ ಈ ನಾಟಕವೂ ಬಾಲಿಶ ಎಂದು ಅನಾವರಣವಾಗುತ್ತದೆ. ಏಕೆಂದರೆ ಇತ್ತೀಚೆಗೆ ಇವರದೇ ಪಕ್ಷದ ಇಂಧನ ಮಂತ್ರಿಗಳಾದ ಡಿ.ಕೆ. ಶಿವ ಕುಮಾರ್ ಅವರು ಇಲ್ಲಿಯ ಉಸ್ತುವಾರಿ ಸಚಿವರಿಗೂ ತಿಳಿಸದೆ ಉಡುಪಿ ಶಾಸಕರ ಜೊತೆ ಯುಪಿಸಿಎಲ್ ಕಂಪೆನಿಗೆ ಭೇಟಿ ಕೊಟ್ಟಾಗ ಈ ಎಡಬಿಡಂಗಿ ಬೆಳಪು ಪಂ. ಅಧ್ಯಕ್ಷರು ಎಲ್ಲಿದ್ದರು ಈ ಎಲ್ಲಾ ಎಡಬಿಡಂಗಿ ಡೋಂಗಿ ತನವನ್ನೆಲ್ಲ ಜನರೇ ನೋಡಿ ನೋಡಿ ರೋಸಿ ಹೋಗಿದ್ದು, ತಕ್ಕ ಪಾಠ ಕಲಿಸಲು ಕಾತುರರಾಗಿರುವರು ಎಂಬುವುದನ್ನು ಗಮನದಲ್ಲಿಟ್ಟು ಇನ್ನು ಮುಂದೆ ಇಂತಹ ಬಾಲಿಶ ಹೇಳಿಕೆಗಳಿಗೆ ಕಡಿವಾಣ ಹಾಕಿಕೊಳ್ಳಲಿ ಎಂದು ಸಲಹೆ ನೀಡುತ್ತೇನೆ ಎಂದು ಎಲ್ಲೂರು ಗ್ರಾ.ಪಂ. ಉಪಾಧ್ಯಕ್ಷ ಜಯಂತ ಕುಮಾರ್ ತಿಳಿಸಿದ್ದಾರೆ.







