ವ್ಯಾಲೆಂಟೈನ್ ಡೇ ಗೆ ಬದಲಾಗಿ ಮಾತೃ ಪಿತೃ ಪೂಜನ್ ದಿವಸ್ !
.jpg)
ಹೊಸದಿಲ್ಲಿ: ಧಾರ್ಮಿಕ ಸಂಘಟನೆಯೊಂದರ ಮೂಲಕ ದಿಲ್ಲಿ ಮೆಟ್ರೊ ಸ್ಟೇಶನ್‌ನಲ್ಲಿ ಅಂಟಿಸಲಾದ ಜಾಹೀರಾತಿನಲ್ಲಿ ಈ ವರ್ಷ ಫೆ. 14ರಂದು ವೆಲೆಂಟೈನ್ ಡೇ ಬದಲಾಗಿ ತಮ್ಮ ತಂದೆ ತಾಯಿಯ ಪೂಜೆ ಮಾಡಲು ಕರೆ ನೀಡಲಾಗಿದೆ. ಕುತೂಹಲವೆಂದರೆ ಈ ಪೋಸ್ಟರ್ ಅಂಟಿಸಿರುವುದು ಲೈಂಗಿಕ ಹಗರಣದಲ್ಲಿ ಜೈಲುಪಾಲಾಗಿರುವ ಆಸಾರಾಂ ಬಾಪೂ ಅವರಿಗೆ ಸಂಬಂಧಿಸಿದ ಸಂಘಟನೆ! ಜೊತೆಗೆ ಈ ಸಂಘಟನೆ ಪ್ರೇಮಿಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುವುದನ್ನು ಕೂಡ ಸಮರ್ಥಿಸಿದೆ.
ಆಸಾರಾಂ ಸಂಘಟನೆ ಇಂತಹ ಜಾಹೀರಾತುಗಳನ್ನು 35 ಸ್ಟೇಶನ್‌ಗಳಲ್ಲಿ ಅಂಟಿಸಿದೆ. ಫೆ. 14ನ್ನು ಮಾತೃಪಿತೃಪೂಜನ್ ದಿವಸ್ ಆಚರಿಸಲು ಸಲಹೆ ನೀಡಿಲಾಗಿದ್ದು ಇದು ಪ್ರಯಾಣಿಕರಲ್ಲಿ ಕೋಪಕ್ಕೆ ಕಾರಣವಾಗಿದೆ. ಸ್ವತಃ ಆಸಾರಾಂ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದು ಅವರಲ್ಲಿ ಕೋಪಕ್ಕೆ ಕಾರಣವಾಗಿದ್ದೆನ್ನಲಾಗಿದೆ. ಜಾಹೀರಾತ್‌ನಲ್ಲಿ ಎರಡು ವಿರೋಧಾಭಾಸದ ಫೋಟೊಗಳಿದ್ದು ಒಂದರಲ್ಲಿ ಮಗು ತಂದೆತಾಯಿಯ ಪೂಜೆ ಮಾಡುತ್ತಿದ್ದರೆ, ಇನ್ನೊಂದು ಚಿತ್ರದಲ್ಲಿ ಯುವ ಜೋಡಿಯೊಂದು ಪರಸ್ಪರ ಕಿವಿ ಹಿಡಿದುಕೊಂಡಿರುವಂತೆ ಹಾಗೂ ಅವರ ಹತ್ತಿರವೇ ಪೊಲೀಸ್ ನಿಂತಿರುವಂತೆ ಜಾಹೀರಾತು ಪ್ರಕಟಿಸಲಾಗಿದೆ.
ಅದರಲ್ಲಿ ನೀಡಲಾದ ಸಂದೇಶದಲ್ಲಿ ಬಹಿರಂಗವಾಗಿ ವಲೈಂಟನ್ ಡೆ ಆಚರಿಸುವ ಮೂಲಕ ಭ್ರಷ್ಟ ವರ್ತನೆ ತೊರಿಸುವ ಜನರ ವಿರುದ್ಧ ಪೊಲೀಸರು ಬಲವಾದ ಕ್ರಮಕೈಗೊಳ್ಳುತ್ತಾರೆ. ವಲೆಂಟೈನ್ ಡೆ ಆಚರಿಸಬೇಡಿರಿ ಎಂದು ಬರೆಯಲಾಗಿದೆ. ಮೆಟ್ರೊದ ಮುಖ್ಯ ವಕ್ತಾರ ಅನುಜ್‌ದಯಾಳ್ ರು "ಈ ಜಾಹೀರಾತನ್ನು ಖಾಸಗಿ ಗುತ್ತೆದಾರ ಕಂಪೆನಿ ಅಂಟಿಸಿದೆ. ಅದು ದಿಲ್ಲಿ ಮೆಟ್ರೊ ಪರಿಸರದ ಎಲ್ಲ ಜಾಹೀರಾಗಳ ಗುತ್ತೆ ಪಡೆದುಕೊಂಡಿದೆ" ಎಂದು ತಿಳಿಸಿದ್ದಾರೆ.
ಇದೀಗ ಜಾಹೀರಾತು ಪ್ರಕರಣದ ಕುರಿತು ತನಿಖೆ ಆರಂಭವಾಗಿದ್ದು ಅಗತ್ಯ ಕ್ರಮಕೈಗೊಳ್ಳಲಾಗುವುದು. ಗುತ್ತೆದಾರರನ್ನು ಈ ಕುರಿತು ಸಂಪರ್ಕಿಸಲಾಗಿದೆ ಎಂದೂ ತಿಳಿಸಿದ್ದಾರೆ ಆದರೆ ತಮ್ಮ ಜಾಹೀರಾತು ಕುರಿತು ಆಸಾರಾಂರ ಬಾಲಸಂಸ್ಕಾರ ಕೇಂದ್ರದ ಪದಾಧಿಕಾರಿಗಳು ಈ ಜಾಹೀರಾತು ಯುವಕರಲ್ಲಿ ಜಾಗೃತಿಗಾಗಿ ಅಂಟಿಸಲಾಗಿದೆ ಹಾಗೂ ವೆಲೆಂಟೈನ್ ಡೇ ಭಾರತೀಯ ಸಂಸ್ಕೃತಿಯ ವಿರುದ್ಧವಿರುವುದಾಗಿದೆ ಎಂದು ಹೇಳಿಕೊಂಡಿದ್ದಾರೆ.







