ಕೃಷಿ ಜಿಡಿಪಿಯಲ್ಲಿ ಗಂಭೀರ ಕೊರತೆಯಾಗಿದೆ: ನೀತಿ ಆಯೋಗದ ಉಪಾಧ್ಯಕ್ಷ ಡಾ. ಅರವಿಂದ್ ಪನಗರಿಯ

ಗುಜರಾತ್: ನೀತಿ ಆಯೋಗದ ಉಪಾಧ್ಯಕ್ಷ ಡಾ. ಅರವಿಂದ್ ಪನಗರಿಯ ಭಾರತದ ಒಟ್ಟು ಸಕಲ ಉತ್ಪಾದನೆಯಲ್ಲಿ ಕೃಪಿಯ ಕಡಿಮೆ ಕೊಡುಗೆಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ದೇಶದ ಶೇ. 49ರಷ್ಟು ಜನಸಂಖ್ಯೆ ಕೃಷಿ ಕ್ಷೇತ್ರವನ್ನುಆಶ್ರಯಿಸಿದ್ದರೂ ಆ ಕ್ಷೇತ್ರದ ಉತ್ಪಾದನೆ ಒಟ್ಟು ಜಿಡಿಪಿಯಲ್ಲಿ ಶೇ. 15ರಷ್ಟು ಮಾತ್ರ ಕೊಡುಗೆ ನೀಡಿದೆ ಎಂದು ತಿಳಿಸಿದ್ದಾರೆ.
ಕೃಷಿಯುತ್ಪಾದನೆ ಹೆಚ್ಚಿಸುವ ಸಲುವಾಗಿ ಎರಡನೆ ಹಸಿರು ಕ್ರಾಂತಿಯನ್ನು ತರಬೇಕೆಂಬುದಕ್ಕೆ ಅವರು ಒತ್ತು ನೀಡಿದ್ದಾರೆ. ಡಾ. ಅರವಿಂದ್ ಪನಗರಿಯ ಇತ್ತೀಚೆಗೆ ಗಾಂಧಿನಗರದಲ್ಲಿ ಆಯೋಜಿಸಲಾಗಿದ್ದ ಮಧ್ಯ ಹಾಗೂ ಪಶ್ಚಿಮ ರಾಜ್ಯಗಳ ಕೃಷಿ ಕ್ಷೇತ್ರದ ಕಾರ್ಯಬಲ ಬೈಠಕ್‌ನ ಅಧ್ಯಕ್ಷತೆ ವಹಿಸಿ ಈ ವಿಚಾರವನ್ನು ವ್ಯಕ್ತಪಡಿಸಿದ್ದರು.
ಜಿಡಿಪಿಯಲ್ಲಿ ಕೃಷಿಕ್ಷೇತ್ರದ ಭಾಗವನ್ನು ಹೆಚ್ಚಿಸಲಿಕ್ಕಾಗಿ ಭೂಮಿ, ಕೃಷಿ, ಬೀಜ ಮುಂತಾದುವುಗಳಲ್ಲಿ ಸುಧಾರಣೆ ತಂದು ಎರಡನೆ ಹಸಿರು ಕ್ರಾಂತಿಯನ್ನು ಮಾಡಬೇಕಾಗಿದೆ ಎಂದಿದ್ದಾರೆ. ಗುಜರಾತ್ ಕೃಷಿ ಕಾರ್ಯಬಲ್ ಪ್ರಮುಖ್ ನಿತಿನ್ ಪಟೇಲ್ ಕೃಷಿ ವಿಕಾಸಕ್ಕಾಗಿ ಹಾಗೂ ಸಮಾಜದಲ್ಲಿ ಕ್ರಾಂತಿ ತರಲಿಕ್ಕಾಗಿ ಕೃಷಿಯನ್ನು ವಾಣಿಜ್ಯದ ದರ್ಜೆಗೇರಿಸಬೇಕೆಂಬ ಬೇಡಿಕೆಯನ್ನು ಮುಂದಿರಿಸಿದ್ದಾರೆ.
ಈ ಬೈಠಕ್‌ನಲ್ಲಿ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಡ, ಗೋವಾ ಹಾಗೂ ಕೇಂದ್ರಾಡಳಿತವಿರುವ ದಾದ್ರಾ ನಾಗರ್ ಹವೇಲಿ ಮತ್ತು ದಿಯು ದಾಮನ್‌ನ ಕೃಷಿಕಾರ್ಯಬಲದ ಪ್ರಮುಖರು ಭಾಗವಹಿಸಿದ್ದರು. ಭಾರತದಲ್ಲಿ ಎರಡನೆ ಹಸಿರುಕ್ರಾಂತಿ ತರುವುದು ಒಂದು ಸವಾಲಾಗಿದ್ದು ಶೆ.78ರಷ್ಟು 2 ಹೆಕ್ಟೇರ್‌ಗಿಂತ ಕಡಿಮೆ ಕೃಷಿ ಭೂಮಿ ಹೊಂದಿದವರಿದ್ದು ಇಲ್ಲಿ ನೀರಾವರಿ ಸೌಲಭ್ಯ ವಿಲ್ಲ.
ಈ ಸಣ್ಣ ರೈತರು ಕೇವಲ ಕೃಷಿಯಿಂದ ತಮ್ಮ ಕುಟುಂಬವನ್ನು ಸಾಕುವುದು ಕಷ್ಟಕರವಾಗಿದೆ. ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪೋಷಕಾಹಾರದ ಬಳಕೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಕೆಳಮಟ್ಟದಲ್ಲಿದೆ. ನಮ್ಮ ದೇಶದಲ್ಲಿ ಸಾಮೂಹಿಕ ಕೃಷಿ ಜನಪ್ರಿಯವಾಗಿಲ್ಲ. ಆದ್ದರಿಂದ ಪರಂಪರಾಗತ ಕೃಷಿ ಕ್ಷೇತ್ರದಲ್ಲಿಯೇ ಕೃಷ್ಯುತ್ಪಾದನೆ ಹೆಚ್ಚಿಸಬೇಕಾಗಿದೆ. ಮತ್ತು ಸಣ್ಣ ಕೃಷಿಕರ ಕೃಷಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಎರಡನೆ ಹಸಿರು ಕ್ರಾಂತಿ ಆವಶ್ಯಕವಾಗಿದೆ.
ಡಾ. ಅರವಿಂದ್ ಪನಗರಿಯ ಸಕಲ ಗೃಹೋತ್ಪಾದನೆಯ ಜಿಡಿಪಿಯ ಕುರಿತೂ ಪ್ರಸ್ತಾಪಿಸಿದ್ದಾರೆ. 1950ರಲ್ಲಿ ಕೃಷಿಉತ್ಪಾದನೆಯು ದೇಶದ ಜಿಡಿಪಿಯಲ್ಲಿ ಶೇ. 50ರಷ್ಟಿತ್ತು. 1995ರಲ್ಲಿ ಅದ ಶೇ. 25ಕ್ಕೆ ಕುಸಿಯಿತು. 2012-13ರಲ್ಲಿ ಅದುಶೇ.15ಕ್ಕೆ ತಲುಪಿತು. 1950ರಲ್ಲಿಗೃಹೋತ್ಪಾದನೆ ಶೇ. 30ರಷ್ಟು ಜಿಡಿಪಿಯಲ್ಲಿ ಪಾಲಿತ್ತು. 1995ರಲ್ಲಿ ಅದರಲ್ಲಿ ಹೆಚ್ಚಳವಾಗಿ ಶೇ. 45ಕ್ಕೆ ತಲುಪಿತು. 2015ರಲ್ಲಿ ಶೆ. 59ಕ್ಕೆ ತಲುಪಿದೆ.
ಆದರೆ ಕೃಷಿ ಕ್ಷೇತ್ರದ ಜಿಡಿಪಿ ತೀರಾ ಕುಸಿತವಾಗಿದೆ. ಆದುದರಿಂದ ಡಾ. ಅರವಿಂದ್ ಪನಗರಿಯ ಭಾರತದ ಜಿಡಿಪಿಯಲ್ಲಿ ಕೃಷಿ ಉತ್ಪಾದನೆಯ ಪಾಲನ್ನು ಹೆಚ್ಚಿಸಲು ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದ್ದಾರೆ. ಒಂದುವೇಳೆ ಹೀಗೆಯೇ ಮುಂದುವರಿದರೆ 2022ಕ್ಕಾಗುವಾಗ ಕೃಷಿಯುತ್ಪಾದನೆ ಶೇ. 10ಕ್ಕೆ ಕುಸಿಯಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.







