ಪಾಲುದಾರನಿಗೆ ಗುಂಡಿಕ್ಕಿ ಆತ್ಮಹತ್ಯೆ ಮಾಡಿದ ವೈದ್ಯ

ಹೈದರಾಬಾದ್, ಫೆ.9: ವ್ಯಾಪಾರಿ ಪಾಲುದಾರನೊಬ್ಬನಿಗೆ ವೈದ್ಯರೊಬ್ಬರು ಗುಂಡಿಕ್ಕಿ ದ ಬಳಿಕ ತಾನು ಅದೇ ರಿವಾಲ್ವರ್‌ನಿಂದ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಡಾ.ಶಶಿ ಕುಮಾರ್ ತನ್ನ ವ್ಯಾಪಾರಿ ಪಾಲುದಾರ ಡಾ. ಉದಯ್‌ಗೆ ಗುಂಡು ಹಾರಿಸಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಮಾಧಪುರದಲ್ಲಿರುವ ಮಲ್ಟಿ ಸ್ಪೆಶಾಲಿಟಿ 100 ಹಾಸಿಗೆಗಳ ಆಸ್ಪತ್ರೆಯಲ್ಲಿ ಡಾ .ಶಶಿಕುಮಾರ್, ಡಾ. ಉದಯ್ ಮತ್ತು ಡಾ. ಸಾಯಿ ಕುಮಾರ್ ಪಾಲುದಾರರು. ವ್ಯವಹಾರದಲ್ಲಿ ಕಂಡು ಬಂದ ವಿವಾದ ಈ ಘರ್ಷಣೆಗೆ ಕಾರಣ ಎನ್ನಲಾಗಿದೆ.
ಸೋಮವಾರ ರಾತ್ರಿ ಹಿಮಾಯತ್ ನಗರದಲ್ಲಿ ಉದಯ್‌ಗೆ ಶಶಿ ಕುಮಾರ್ ಕಾರ್‌ನೊಳಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಉದಯ್ ಕಾರ್‌ನಿಂದ ಇಳಿದು, ರಿಕ್ಷಾದ ಮೂಲಕ ಚಿಕಿತ್ಸೆಗೆ ಸೇರಿದದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ.
ಈ ಘಟನೆ ನಡೆದ ಬೆನ್ನೆಲ್ಲೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಶಶಿ ಕುಮಾರ್ ಅವರನ್ನು ಬಂಧಿಸಲು ಪೊಲೀಸರು ತಂಡ ರಚಿಸಿದ್ದಾರೆ. ಮಧ್ಯ ರಾತ್ರಿ ವೇಳೆ ಮೊಯಿನಾಬಾದ್‌ನ ಫಾರ್ಮ್‌ಹೌಸ್‌ವೊಂದರಲ್ಲಿ ಡಾ.ಶಶಿ ಕುಮಾರ್ ಅವರ ಮೃತದೇಹ ಪತ್ತೆಯಾಗಿದೆ. ಪಿಸ್ತೂಲ್‌ನ್ನು ಬಾಯಿಗಿಟ್ಟು ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ.
ಡಾ. ಶಶಿ ಕುಮಾರ್ ಮೃತದೇಹದ ಪಕ್ಕದಲ್ಲಿ ದೆಟ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ತಾನು ಉದಯ್‌ಗೆ ಗುಂಡು ಹಾರಿಸಿಲ್ಲ. ಇನ್ನೊಬ್ಬ ಪಾಲುದಾರ ಡಾ. ಸಾಯಿ ಕುಮಾರ್ ಗುಂಡು ಹಾರಿಸಿರುವುದಾಗಿ ದೆತ್ ನೋಟ್‌ನಲ್ಲಿದೆ. ಪೊಲೀಸರು ಶಶಿ ಕುಮಾರ್ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಮಾಧಪುರದಲ್ಲಿರುವ ಮಲ್ಟಿ ಸ್ಪೆಶಾಲಿಟಿ 100 ಹಾಸಿಗೆಗಳ ಆಸ್ಪತ್ರೆಗೆ ಡಾ .ಶಶಿಕುಮಾರ್, ಡಾ. ಉದಯ್ ಮತ್ತು ಡಾ. ಸಾಯಿ ಕುಮಾರ್ ಪಾಲುದಾರರು.
ಶಶಿ ಕುಮಾರ್ ಈ ಆಸ್ಪತ್ರೆಯ ನಿರ್ದೆಶಕ. ಅವರು 75 ಲಕ್ಷ ಬಂಡವಾಳ ಹೂಡಿದ್ದರು. ಉದಯ್ ಮೆಡಿಕಲ್ ಡೈರೆಕ್ಟರ್ ಮತ್ತು ಸಾಯಿ ಕುಮಾರ್ ಸಿಇಒ ಆಗಿದ್ದಾರೆ ಎಂದು ಕೇಂದ್ರ ವಲಯ ಡಿಸಿಪಿ ವಿಬಿ ಕಮಲಹಾಸನ್ ರೆಡ್ಡಿ ತಿಳಿಸಿದ್ದಾರೆ.
ಮೂವರೊಳಗೆ ವ್ಯವಹಾರದಲ್ಲಿ ಬಿರುಕುಂಟಾಗಿತ್ತು. ಸಮಸ್ಯೆಯನ್ನು ಬಗೆ ಹರಿಸಲು ಮೂವರು ತೀರ್ಮಾನಿದ್ದರು. ಉದಯ್ ಅವರ ಕಾರ್‌ನಲ್ಲಿ ಇವರೊಳಗೆ ಮಾತುಕತೆ ಆರಂಭಗೊಂಡಿತು. ಉದಯ್ ಚಾಲನಕನ ಸಿಟ್‌ನಲ್ಲಿ ಕುಳಿತಿದ್ದರು. ಪಕ್ಕದಲ್ಲಿ ಸಾಯಿ ಕುಮಾರ್ ಮತ್ತು ಹಿಂಬದಿಯ ಸೀಟ್‌ನಲ್ಲಿ ಶಶಿ ಕುಮಾರ್ ಇದ್ದರು. ಮಾತುಕತೆಯ ವೇಳೆ ಶಶಿ ಕುಮಾರ್ ತಾನು ನೀಡಿರುವ ಹಣವನ್ನು ಹಿಂದಕ್ಕೆ ನೀಡುವಂತೆ ಕೇಳಿದ್ದಾರೆ. ಆಗ ಅವರೊಳಗೆ ಮಾತಿನ ಚಕಮಕಿ ನಡೆದಿದೆ. ಸಿಟ್ಟಿನಿಂದ ಶಶಿ ಕುಮಾರ್ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಉದಯ್ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಉದಯ್ ಕಿವಿಗೆ ಗಾಯವಾಗಿದೆ.







