ಬೆಂಗಳೂರು:ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಗೆಲುವು ಜೆಡಿಎಸ್ ಮೇಲೆ ಅವಲಂಬಿತ-ಸಮೀಕ್ಷೆ
ಬೆಂಗಳೂರು.ಫೆ.9 : ರಾಜ್ಯದಲ್ಲಿ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಗೆಲುವು ಜೆಡಿಎಸ್ ಮೇಲೆ ಅವಲಂಬಿತವಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ಆರ್. ಪ್ಯಾಕ್ ಎಂಬ ಸಂಸ್ಥೆ ಈ ಸಂಬಂಧ ಸಮೀಕ್ಷೆ ನಡೆಸಿದ್ದು, ಜೆಡಿಎಸ್ ಪಡೆಯುವ ಮತಗಳ ಆಧಾರದ ಮೇಲೆ ಕಾಂಗ್ರೆಸ್ ಅಥವಾ ಬಿಜೆಪಿ ಅಭ್ಯರ್ಥಿಗಳ ಭವಿಷ್ಯ ಅಡಗಿದೆ ಎಂದು ತಿಳೀಸಿದೆ. ರಿಪೋರ್ಟರ್ಸ್ ಪ್ಯಾಕ್ ಸಂಸ್ಥೆ ಹೆಬ್ಬಾಳ, ದೇವದುರ್ಗ ಹಾಗೂ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದೆ. ಅದರ ವರದಿಯ ಆಧಾರದ ಪ್ರಕಾರ ಜೆಡಿಎಸ್ ಗಣನೀಯ ಮತಗಳನ್ನು ಪಡೆದರೆ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಡಬೇಕಾದ ಸ್ಥಿತಿ ಎದುರಾಗಬಹದು ಎಂದು ಹೇಳಿದೆ. ಜೆಡಿಎಸ್ ಕಡಿಮೆ ಮತಗಳನ್ನು ಪಡೆದಲ್ಲಿ ಕಾಂಗ್ರೆಸ್ ಎರಡರಲ್ಲಿ ಬಿಜೆಪಿ ಒಂದು ಸ್ಥಾನವನ್ನು ಮಾತ್ರ ಗೆಲ್ಲಲಿದೆ.
ಹೆಬ್ಬಾಳ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗಣನೀಯ ಪ್ರಮಾಣದ ಮತಗಳನ್ನು ಪಡೆದರೆ ಕಾಂಗ್ರೆಸ್‌ಗೆ ಹಿನ್ನೆಡೆಯಾಗಲಿದೆ. ಅದೇ ಕಾಲಕ್ಕೆ ಒಕ್ಕಲಿಗರ ಮತಗಳು ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರ ಕಡೆ ವಾಲಿದರೆ ಅವರ ಗೆಲು
ವಿನತ್ತ ಮುನ್ನಡೆಯಬುದು ಎಂದು ಹೇಳಿದೆ. ಇಲ್ಲವಾದಲ್ಲಿ ರೆಹಮಾನ್ ಷರೀಫ್ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಲಿವೆ. ಈ ಬಾರಿಯ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಮತ್ತಿತರ ಅಭ್ಯರ್ಥಿಗಳು ಕಣದಲ್ಲಿ ಇಲ್ಲದೇ ಇರುವುದು ಸಹ ರೆಹಮಾನ್ ಷರೀಫ್ ಗೆಲುವಿಗೆ ಸಹಕಾರಿಯಾಗಬಹುದು ಎನ್ನುವ ಅಂಶವನ್ನು ಈ ಸಂಸ್ಥೆ ಪತ್ತೆ ಹೆಚ್ಚಿದೆ. ಇನ್ನು ದೇವದುರ್ಗ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿದ್ದು, ಹೆಚ್ಚಿನ ಮತಗಳನ್ನು ಗಳಿಸಿ ಕಾಂಗ್ರೆಸ್‌ಗೆ ಸಿಂಹಸ್ವಪ್ನವಾಗಬಹುದು. ಇದರ ಪರಿಣಾಮ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್
ಗೆಲುವು ಗಳಿಸಬಹುದು ಎನ್ನುವ ವಾದ ಮುಂದಿಟ್ಟಿದೆ. ಈ ಮಧ್ಯೆ ಜೆಡಿಎಸ್ ಹೆಬ್ಬಾಳದಲ್ಲಿ ಗಣನೀಯ ಪ್ರಮಾಣದ ಮತಗಳನ್ನು ಪಡೆಯದೆ ಹೋದರೆ ಮತ್ತು ಒಕ್ಕಲಿಗ ಮತಗಳು ಬಿಜೆಪಿ ಅಭ್ಯರ್ಥಿಗೆ ಪೂರ್ಣ ಪ್ರಮಾಣದಲ್ಲಿ ಬೀಳದೇ ಹೋದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೆಹಾನ್ ಷರೀಫ್ ಗೆ
ಲ್ಲಲಿದ್ದಾರೆ. ಈ ಮಧ್ಯೆ ದೇವದುರ್ಗ ಕ್ಷೇತ್ರದಲ್ಲಿ ಹೆಚ್ಚು ಕಡಿಮೆ ಬಿಜೆಪಿ ಅಭ್ಯರ್ಥಿ ಮುನ್ನಡೆಯಲಿದ್ದಾರೆ. ಹೀಗಾಗಿ ಕಾಂಗ್ರೆಸ್ ತನ್ನ ಮತ್ತೊಂದು ಗೆಲುವಿಗಾಗಿ ಬೀದರ್ ಉತ್ತರ ಕ್ಷೇತ್ರದ ಕಡೆ ಗಮನ ಹರಿಸುವುದು ಅನಿವಾರ್ಯ.
ಜೆಡಿಎಸ್ ಕ್ಯಾಂಡಿಡೇಟ್ ಹಾಗೂ ಕಾಂಗ್ರೆಸ್ ಕ್ಯಾಂಡಿಡೇಟ್ ಮಧ್ಯೆ ಅಲ್ಪಸಂಖ್ಯಾತ ಮತಗಳು ಒಡೆದು ಹೋದರೆ ಲಿಂಗಾಯತ ಮತಗಳು ಕನ್‌ಸಾಲಿಡೇಟ್ ಆಗಿ ಬಿಜೆಪಿಯ ಪ್ರಕಾಶ್ ಖಂಡ್ರೆ ಗೆಲ್ಲಬಹುದು ಎಂಬ ಅನುಮಾನ ಈಗಾಗಲೇ ಆ ಸಮುದಾಯದಲ್ಲೇ ಬಂದಿದೆ.
ಹೀಗಾಗಿ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಧ್ಯಕ್ಕೆ ಮುನ್ನಡೆ ಸಾಧಿಸಿದ್ದು ಅದರ ಲೆಕ್ಕಾಚಾರಗಳ ಪ್ರಕಾರ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಪಡೆಯುವ ಮತಗಳ ಆಧಾರದ ಮೇಲೆ ಕಾಂಗ್ರೆಸ್ ಇಲ್ಲವೇ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಗೆಲ್ಲಬಹುದು.ಅಥವಾ ಒಂದೇ ಕ್ಷೇತ್ರದಲ್ಲಿ ಗೆದ್ದು ಸಮಾಧಾನಪಟ್ಟುಕೊಳ್ಳಬಹುದು ಎಂದು ಆರ್-ಪ್ಯಾಕ್ ಹೇಳಿದೆ.







