ಒಂದು ಲೀಟರ್ ಇಂಧನದಲ್ಲಿ 100ಕಿ.ಮೀ. ಓಡುವ ಕಾರು!

ಕಾನ್ಸೆಪ್ಟ್ ಕಾರ್‌ನ ಕಮಾಲ್! ಅಮೆರಿಕದ ಆಟೊ ಎಕ್ಸ್‌ಪೊದಲ್ಲಿ ಪ್ರದರ್ಶನ!
ಅಮೆರಿಕ: ಒಂದು ಲೀಟರ್ ಪೆಟ್ರೋಲ್‌ನಲ್ಲಿ ಕಾರು ಎಷ್ಟು ಕಿ.ಮೀ ಓಡಬಹುದು. ಹೆಚ್ಚೆಂದರೆ ಮೂವತ್ತುಕಿ.ಮೀ. ತಾನೆ. ಈಗ ನೂರು ಕಿ.ಮೀ ಓಡುವ ಕಾರೊಂದನ್ನು ಅಮೆರಿಕದಲ್ಲಿ ಕಂಡು ಹುಡುಕಲಾಗಿದೆ. ಆಟೊ ಎಕ್ಸ್‌ಪೋದಲ್ಲಿ ಇಂತಹ ಮೂರು ಬಾಗಿಲಿನ ಕಾರನ್ನು ಪ್ರದರ್ಶಿಸಲಾಗಿದೆ. ಕೆಲವು ಕಾಂಸೆಪ್ಟ್ ವಾಹನಗಳು ನೋಡಲಿಕ್ಕೆ ಫಾರ್ಮುಲಾ ವನ್ ಕಾರಿನಂತೆ ಕಾಣುತ್ತಿವೆ. 1938ರಲ್ಲಿ ಬ್ಯೂಕ್ ಜಾಬ್ ಎಂಬವನ ಹೆಸರಲ್ಲಿ ಮೊದಲ ಕಾಂಸೆಪ್ಟ್ ಕಾರ್‌ನ್ನು ಪ್ರದರ್ಶಿಸಲಾಗಿತ್ತು.
ಕಾಂಸೆಪ್ಟ್ ಕಾರ್ ಅಂದರೆ ಭವಿಷ್ಯದ ಕಾರಿನ ಶಾಖೆ ಎಂದರ್ಥ ಅಮೆರಿಕದ ಆಟೊ ಎಕ್ಸ್‌ಪೊದಲ್ಲಿ ಕಂಪೆನಿಗಳು ಗ್ರಾಹಕರ ಅಭಿಪ್ರಾಯವನ್ನು ಸಂಗ್ರಹಿಸಲು ಯತ್ನಿಸುತ್ತವೆ. ಕೆಲವು ಬಾರಿ ಭವಿಷ್ಯದ ಕಾರುಗಳು ಡಿಸೈನ್ ಆಧಾರಿತವಾಗಿರುತ್ತವೆ. ಪ್ಲಗ್ ಇನ್ ಹೈಬ್ರಿಡ್ ಹೆಚ್‌ಬೈಕ್ ಕಾರು ಒಂದು ಲೀಟರ್ ಇಂಧನದಲ್ಲಿ 100ಕಿ,ಮೀ ಓಡುತ್ತದೆ ಎಂದು ಸಂಬಂಧಿಸಿದ ಕಂಪೆನಿ ಹೇಳುತ್ತಿದೆ. ಇದರಲ್ಲಿ ಪೆಟ್ರೋಲ್ ಇಂಜಿನ್ ಹಾಗೂ ವಿದ್ಯುತ್ ಇಂಜಿನ್ ಅಳವಡಿಸಲಾಗಿದೆ. ಈ ಕಾರಿನಿಂದಾಗಿ ವಾತಾವರಣ ಮಲಿನಗೊಳ್ಳುವುದಿಲ್ಲಎಂದು ಸದ್ರಿ ಕಂಪೆನಿ ಹೇಳಿಕೊಂಡಿದೆ.







