Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಫೆ 14 : ಕಾಂತಾವರದಲ್ಲಿ ಮುದ್ದಣ...

ಫೆ 14 : ಕಾಂತಾವರದಲ್ಲಿ ಮುದ್ದಣ ಸಾಹಿತ್ಯೋತ್ಸವ 2016

ವಾರ್ತಾಭಾರತಿವಾರ್ತಾಭಾರತಿ9 Feb 2016 5:14 PM IST
share
ಫೆ 14 : ಕಾಂತಾವರದಲ್ಲಿ ಮುದ್ದಣ ಸಾಹಿತ್ಯೋತ್ಸವ 2016

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ 2015ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ, ಸಂಘದ 2016ರ ಸಾಲಿನ ಗೌರವ ಪ್ರಶಸ್ತಿ ಪ್ರದಾನ, ’ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಹದಿನಾಲ್ಕು ಕೃತಿಗಳ ಲೊಕಾರ್ಪಣೆ, ಅಲ್ಲಮಪ್ರಭು ಪೀಠದ 2013ರ ಸಾಲಿನ ಉಪನ್ಯಾಸಗಳ ಸಂಪುಟ ’ಕರಣ ಕಾರಣ -2 ’ ಲೋಕಾರ್ಪಣ , ನುಡಿನಮನ ಹೀಗೆ ಸಾಹಿತ್ಯೋತ್ಸವದ ಸಂಭ್ರಮ ಕನ್ನಡ ಭವನದಲ್ಲಿ ಫೆ 14ರಂದು ಬೆಳಿಗ್ಗೆ 9.30 ರಿಂದ ಸಂಜೆ ವರೆಗೆ ಜರಗಲಿವೆ. 

ಫೆ 14ರಂದು ಬೆಳಿಗ್ಗೆ 10ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಪ್ರೊ. ಶ್ರೀಪತಿ ಕಲ್ಲೂರಾಯ ಮುದ್ದಣ ಸಾಹಿತ್ಯೋತ್ಸವ  2016 ಸಮಾರಂಭವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು 2016ರ ಸಾಲಿನ ಮುದ್ದಣ ಸ್ಮಾರಕ ಕಾವ್ಯ ಪ್ರಶಸ್ತಿ ಮತ್ತು ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ತಮ್ಮ ’ಅವಳ ಕವಿತೆ’ ಕವನ ಸಂಕಲನದ ಹಸ್ತಪ್ರತಿಗಾಗಿ ಎಂ.ಎಸ್. ರುದ್ರೇಶ್ವರಸ್ವಾಮಿ ಬೆಂಗಳೂರು ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ, ಮಹಾವೀರ ಪಾಂಡಿ ಕಾಂತಾವರ, ಪ್ರಕಾಶ್ ಕೊಡೆಂಕಿರಿ ಪುತ್ತೂರು ಅವರಿಗೆ ಸಂಘದ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಂಗಳೂರಿನ ತಜ್ಞ ವೈದ್ಯ, ಚಿಂತಕ, ಲೇಖಕರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ’ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಹದಿನಾಲ್ಕು ಕೃತಿಗಳು, ಅಲ್ಲಮಪ್ರಭು ಪೀಠದ 2013ರ ಸಾಲಿನ ಉಪನ್ಯಾಸಗಳ ಸಂಪುಟ ’ಕರಣ ಕಾರಣ -2’ ಲೊಕಾರ್ಪಣೆ ಮಾಡಲಿದ್ದಾರೆ. ಅಪರಾಹ್ನ 1.30ರಿಂದ 3.00ರವರೆಗೆ ಕು. ಶುಭಾಂಜನ ದೇವಾನಂದ ಭಟ್, ಬೆಳುವಾಯಿ ಅವರ ಸುಗಮ ಸಂಗೀತ ಮತ್ತು ಜಾನಪದ ಗೀತೆಗಳ ಗಾಯನವಿದೆ. ಅಪರಾಹ್ನ 3.30ರಿಂದ 5.30 ರವರೆಗೆ ಕಾಂತಾವರ ಕನ್ನಡಸಂಘದ ತಿಂಗಳ ಉಪನ್ಯಾಸ ಕಾರ್ಯಕ್ರಮ ನುಡಿನಮನ 98ರ

ಉಪನ್ಯಾಸ ಮಾಲಿಕೆಯಲ್ಲಿ ಮಂಗಳೂರು ಆಕಾಶವಾಣಿಯ ಡಾ. ಸದಾನಂದ ಪೆರ್ಲ ಅವರು ರಾಷ್ಟ್ರಕವಿ ಗೋವಿಂದ ಪೈ ಅವರ ಕಾವ್ಯದ ಮರು ಓದು ಕುರಿತು ಉಪನ್ಯಾಸ ನೀಡಲಿದ್ದಾರೆ.

ನಾಡಿಗೆ 150ನೇ ನಮಸ್ಕಾರ!

    ಅವಿಭಜಿತ ದ.ಕ ಜಿಲ್ಲೆಯು ಕಾಸರಗೋಡೂ ಸೇರಿದಂತೆ ನಾಡಿಗೆ ಕೊಟ್ಟ ಸಾಧಕರನ್ನು ಹುಡುಕಿ ಹಿಡಿದು ಅವರ  ಕುರಿತಾದ ಹೊತ್ತಗೆಯನ್ನು ಹೊರತಂದು ನಾಡನ್ನು ಕಟ್ಟುವುದು ಹೇಗೆ ಎನ್ನುವುದನ್ನು ದಾಖಲಿಸುವ ಪ್ರಯತ್ನ ’ನಾಡಿಗೆ ನಮಸ್ಕಾರ’ ಎನ್ನುವ ಗ್ರಂಥಮಾಲೆ. ರಾಜ್ಯವು ಸುವರ್ಣ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ (2006) ಸ್ಥಾಪಿಸಿದ ಈ ಮಾಲೆಯಲ್ಲಿ ಸಾರ್ವಜನಿಕರ ಬೆಂಬಲದಿಂದ ಸಂಘವು ಈಗಾಗಲೇ 136 ಹೊತ್ತಗೆಗಳನ್ನು ಹೊರತಂದಿದ್ದು ಇದೀಗ ಮತ್ತೆ ಹದಿನಾಲ್ಕು ಹೊತ್ತಗೆಗಳು ಅನಾವರಣಗೊಂಡು ನೂರೈವತ್ತರ ದಾಖಲೆ ನಿರ್ಮಿಸುತ್ತಿದೆ.

ಈ ಬಾರಿ ಅನಾವರಣಗೊಳ್ಳುವ ಕೃತಿಗಳು ಮತ್ತು ಲೇಖಕರು:

 137) ಸಾಂಸ್ಕೃತಿಕ ರಾಯಭಾರಿ: ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ (ಲೇ: ಡಾ.ವಸಂತಕುಮಾರ್) 138) ರೈತಬಂಧು: ಶಿವಪುರ ಸುಬ್ಬಣ್ಣನಾಯಕ್ (ಲೇ: ಡಾ ವಸಂತಕುಮಾರ್) 139) ಯಕ್ಷಗಾನ ಗುರುಕುಲ ರೂವಾರಿ: ಕವಿ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟ (ಲೇ: ಚಂದ್ರಶೇಖರ ಮಂಡೆಕೋಲು) 140) ಕವಿಹೃದಯದ ಸಾಂಸ್ಕೃತಿಕ ಸಂತ: ಉಪ್ಪುಂದ ಚಂದ್ರಶೇಖರ ಹೊಳ್ಳ (ಡಾ. ಕನರಾಡಿ ವಾದಿರಾಜ ಭಟ್) 141) ಕರಾವಳಿಯ ರಾಜಕೀಯ ಮುತ್ಸದ್ಧಿ: ಉರಿಮಜಲು ಕೆ. ರಾಮಭಟ್ (ಲೇ: ಡಾ. ಹೆಚ್. ಜಿ. ಶ್ರೀಧರ್) 142) ಯಕ್ಷಗಾನದ ರಸಿಕರತ್ನ : ವಿಟ್ಲ ಗೋಪಾಲಕೃಷ್ಣ ಜೋಶಿ (ಲೇ: ಡಾ. ವಸಂತ ಕುಮಾರ್) 143) ನವೋದಯ ಸಾಹಿತ್ಯದ ಕಲ್ಪತರು: ಎಮ್. ಎನ್. ಕಾಮತ್ (ಲೇ: ಬಿ. ಲೀಲಾ ಭಟ್) 144) ಸಮನ್ವಯ ಸಾಹಿತ್ಯದ ಲೇಖಕಿ: ಎ. ಪಿ. ಮಾಲತಿ (ಲೇ: ಡಾ. ಶೈಲಾ ಯು.) 145) ಜೈನಮಹಿಳೆ ಕಾವ್ಯನಾಮದ ಕವಯಿತ್ರಿ: ನೆಲ್ಲಿಕಾರು ರಾಧಮ್ಮ (ಲೇ: ರಾಜಶ್ರೀ ಹಂಪನಾ) 146) ಕನ್ಯಾನದ ಭಾರತ ಸೇವಾಶ್ರಮದ ಸ್ಥಾಪಕ: ಧೀರೇಂದ್ರನಾಥ ಭಟ್ಟಾಚಾರ್ಯ (ಲೇ: ವಿಜಯಶೆಟ್ಟಿ ಸಾಲೆತ್ತೂರು) 147) ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ : ಕೆ. ಐತಪ್ಪ ನಾಕ್ (ಲೇ: ಪುಷ್ಪಲತಾ ಎಂ) 148) ಮಹಾಕಾವ್ಯಗಳ ಕವಿ: ಡಾ. ಪ್ರದೀಪ್ ಕುಮಾರ್ ಹೆಬ್ರಿ (ಲೇ: ದೀಪಾ ಫಡ್ಕೆ) 149) ಐತಿಹ್ಯ ಕಥೆಗಳ ರಾಜ: ಬೇಕಲ ರಾಮನಾಯಕ (ಲೇ: ಎ. ನರಸಿಂಹ ಭಟ್, ಕಾಸರಗೋಡು), 150) ಹೊರನಾಡ ಕನ್ನಡ ಸೇನಾನಿ: ಹೆಚ್.ಬಿ.ಎಲ್ ರಾವ್ (ಲೇ: ಶ್ರೀನಿವಾಸ ಜೋಕಟ್ಟೆ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X