ಮೂಡುಬಿದಿರೆ : 2ನೇ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್ -ವಿದ್ಯಾರ್ಥಿ ಪ್ರತ್ಯೂಷ್ ಪಿ. ಚಿನ್ನದ ಪದಕ

ಮೂಡುಬಿದಿರೆ: ಉತ್ತರಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಆಶ್ರಯದಲ್ಲಿ ಮಯೂರ ವರ್ಮ ವೇದಿಕೆ ಟಾಗೂರು ಬೀಚ್ ಕಾರವಾರ ಇಲ್ಲಿ ಜ.30 ಮತ್ತು 31 ರಂದು ನಡೆದ 2ನೇ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನ 30 ಕೆಜಿ ಕುಮಿಟೆ ವಿಭಾಗದಲ್ಲಿ ಮೂಡುಬಿದಿರೆಯ ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್‌ನ 6 ನೇ ತರಗತಿಯ ವಿದ್ಯಾರ್ಥಿ ಪ್ರತ್ಯೂಷ್ ಪಿ. ಚಿನ್ನದ ಪದಕ ಪಡೆದಿದ್ದಾನೆ.
ರಾಜ್ಯ ಕರಾಟೆ ಶಿಕ್ಷಕರ ಸಂಘ ಮತ್ತು ಕೆನ್-ಇ-ಮಬುನಿ-ಶಿಟೋ-ರಿಯು ಕರಾಟೆ ಸ್ಕೂಲ್ ಆಫ್ ಇಂಡಿಯಾ ಇವರ ವತಿಯಿಂದ ಉಡುಪಿ ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದ, ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜ.9 ರಂದು ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಯ ಪದಕವನ್ನು ಪಡೆದಿದ್ದಾನೆ. ಈತ ಶೊರಿನ್-ರಿಯೂ ಕರಾಟೆಯ ಮುಖ್ಯ ಶಿಕ್ಷಕ ನದೀಂ ಮತ್ತು ಸರ್ಫರಾರ್ ಅವರ ಶಿಷ್ಯ ಹಾಗೂ ಉದ್ಯಮಿ ಪ್ರಕಾಶ್ ಭಂಡಾರಿ-ಸುಜಾತ ದಂಪತಿಯ ಪುತ್ರ.
Next Story





