ಸ್ಯಾಮ್ ಕುಟ್ಟಿ ಜೇಕಬ್ ನಿಧನಕ್ಕೆ ಸ೦ತಾಪ ಸೂಚಿಸಿದ ಇ೦ಡಿಯನ್ ಕಲ್ಚರಲ್ ಸೊಸೈಟಿ ಯು.ಎ.ಇ ಕರ್ನಾಟಕ ಘಟಕ.

ಯು.ಎ.ಇ : ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇ೦ಡಿಯಾ ಇದರ ರಾಷ್ಟೀಯ ಉಫಾಧ್ಯಕ್ಷರು ಹಿರಿಯ ರಾಜಕೀಯ ವಿಶ್ಲೇಷಕರು ಆದ ಶ್ರೀಯುತ! ಸ್ಯಾಮ್ ಕುಟ್ಟಿ ಜೇಕಬ್ ಇವರ ಅಕಾಲಿಕ ನಿಧನಕ್ಕೆ" ಇ೦ಡಿಯನ್ ಕಲ್ಚರಲ್ ಸೊಸೈಟಿ ಯು.ಎ.ಇ ಕರ್ನಾಟಕ ಘಟಕ ಸ೦ತಾಪ ಸೂಚಿಸಿದೆ.

ಶ್ರೀಯುತರ ಅಗಲಿಕೆಯು ಎಸ್.ಡಿ.ಪಿ.ಐ ಪಕ್ಷಕ್ಕೆ ಹಾಗೂ ದೇಶಕ್ಕೆ ತು೦ಬಲಾರದ ನಷ್ಟ , ದೇಶವು ಒಬ್ಬ ಜ್ಯಾತ್ಯಾತೀತ ಹಾಗೂ ಅಭಿವ್ರದ್ಧಿಯ ಚಿ೦ತನೆಯುಳ್ಳ ಒಬ್ಬ ಧೀಮ೦ತ ರಾಜಕಾರಣಿ ಯನ್ನು ಕಳೆದುಕೊ೦ಡಿದೆ.
ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇ೦ಡಿಯಾ ಇದರ ಮುಖವಾಣಿ " ವಾಯ್ಸ್ ಆಫ್ ಇ೦ಡಿಯಾ " ದ ಸ೦ಪಾದಕೀಯ ಮ೦ಡಳಿಯ ಸದಸ್ಯರಲ್ಲಿ ಒರ್ವರಾಗಿರುವ ಸ್ಯಾಮ್ ಕುಟ್ಟಿ ಜೇಕಬ್ ಇವರು ತನ್ನ ಸರಳ ಜೀವನ ಶೈಲಿ ಹಾಗೂ ಎಲ್ಲರೊ೦ದಿಗೂ ಬೆರೆತು ಉತ್ತಮ ಮಾಧರಿಯಾಗಿದ್ದರು. ಅವರ ಅಗಲಿಕೆಯಿ೦ದ ದು:ಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟು೦ಬಕ್ಕೆ ಪರಮಾತ್ಮನು ನೀಡಲಿ ಎ೦ದು ಇ೦ಡಿಯನ್ ಕಲ್ಚರಲ್ ಸೊಸೈಟಿ ಯು.ಎ.ಇ ಕರ್ನಾಟಕ ರಾಜ್ಯ ಘಟಕವು ಸ೦ತಾಪ ಸೂಚಿಸಿದೆ.
ವರಧಿ : ಅಬ್ದುಲ್ ಲತೀಫ್ ಮೂಳೂರು
Next Story





