Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುಳ್ಯ: ಒಂದು ನಾಮಪತ್ರ ತಿರಸ್ಕೃತ

ಸುಳ್ಯ: ಒಂದು ನಾಮಪತ್ರ ತಿರಸ್ಕೃತ

ವಾರ್ತಾಭಾರತಿವಾರ್ತಾಭಾರತಿ9 Feb 2016 6:04 PM IST
share

ಸುಳ್ಯ: ಜಿ.ಪಂ., ತಾ.ಪಂ. ಚುನಾವಣೆಗೆ ಸಲ್ಲಿಸಲಾದ ನಾಮಪತ್ರಗಳ ಪರಿಶೀಲನೆ ಮಂಗಳವಾರ ನಡೆಯಿತು. ಜಿ.ಪಂ. ಚುನಾವಣಾಧಿಕಾರಿ ಅರುಣಪ್ರಭ ಜಿಲ್ಲಾ ಪಂಚಾಯತ್ ಅಭ್ಯರ್ಥಿಗಳ ನಾಮಪತ್ರಗಳನ್ನು ಹಾಗೂ ತಾ.ಪಂ. ಚುನಾವಣಾಧಿಕಾರಿ ಅನಂತಶಂಕರ್ ತಾ.ಪಂ. ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲಿಸಿದರು. ಅರಂತೋಡು ತಾ.ಪಂ. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯಿಷಾ ಅವರ ನಾಮಪತ್ರವು ಪ್ರಾಯದ ಉಲ್ಲೇಖದಲ್ಲಿ ವ್ಯತ್ಯಯ ಕಂಡುಬಂದ ಹಿನ್ನೆಲೆಯಲ್ಲಿ ತಿರಸ್ಕರಿಸಲ್ಪಟ್ಟಿತು. ಬೆಳ್ಳಾರೆ ಜಿ.ಪಂ. ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕರುಣಾಕರ ಬರೆಮೇಲು ತನ್ನ ನಾಮಪತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂದು ನಮೂದಿಸಿದ್ದರು. ಆದರೆ ಪಕ್ಷದಿಂದ ಬಿ ಫಾರ್ಮ್ ದೊರೆಯದ ಹಿನ್ನೆಲೆಯಲ್ಲಿ ಅವರಿಗೆ ಬಿ ಫಾರ್ಮ್ ಹಾಜರುಪಡಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಲ್ಪಟ್ಟರು. ಅರಂತೋಡು ಜಿ.ಪಂ. ಕ್ಷೇತ್ರದಿಂದ ಕಾಂಗ್ರೆಸ್ ಡಮ್ಮಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸೋಮಶೇಖರ ಕೊಯಿಂಗಾಜೆ, ಗುತ್ತಿಗಾರು ಜಿ.ಪಂ. ಜೆಡಿಎಸ್ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿ ಬಳಿಕ ಗುತ್ತಿಗಾರು ತಾ.ಪಂ. ಕ್ಷೇತ್ರಕ್ಕೆ ಸಲ್ಲಿಸಿದ್ದ ಜ್ಯೋತಿ ಪ್ರೇಮಾನಂದ, ಐವರ್ನಾಡು ತಾ.ಪಂ. ಕ್ಷೇತ್ರಕ್ಕೆ ಕಾಂಗ್ರೆಸ್ ಡಮ್ಮಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಶೋಕ್ ಚೂಂತಾರು ಅವರ ನಾಮಪತ್ರಗಳು ಕೂಡಾ ಪಕ್ಷೇತರ ಎಂದು ಪರಿಗಣಿಸಲ್ಪಟ್ಟಿತು.

ಸುಳ್ಯ ತಾಲೂಕಿನಲ್ಲಿ ತಾ.ಪಂ.ನ 13 ಸ್ಥಾನಗಳಿಗೆ 38 ಮಂದಿ ನಾಮಪತ್ರ ಹಾಗೂ ಜಿಲ್ಲಾ ಪಂಚಾಯತ್‌ನ 4 ಸ್ಥಾನಗಳಿಗೆ 20 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂತೆಗೆಯಲು ಇನ್ನೆರಡು ದಿನಗಳು ಬಾಕಿ ಇವೆ. ಆ ಬಳಿಕವಷ್ಟೇ ಕಣದಲ್ಲಿ ಉಳಿಯುವವರ ಸಂಖ್ಯೆ ಸ್ಪಷ್ಟಗೊಳ್ಳಲಿದೆ. ಬೆಳ್ಳಾರೆ ಜಿ.ಪಂ. ಕ್ಷೇತ್ರಕ್ಕೆ ಬಿಜೆಪಿಯ ಎಸ್.ಎನ್.ಮನ್ಮಥ, ಕಾಂಗ್ರೆಸ್‌ನ ರಾಜೀವಿ ರೈ, ಜಾತ್ಯಾತೀತ ಜನತಾದಳದ ದಯಾಕರ ಆಳ್ವ, ಪಕ್ಷೇತರರಾಗಿ ವಸಂತ ಕೆ. ಕೊಡಿಯಾಲ, ವಿಶ್ವನಾಥ ಅಲೆಕ್ಕಾಡಿ, ಅಬ್ದುಲ್ ಜಲೀಲ್ ಅಯ್ಯನಕಟ್ಟೆ, ಗುತ್ತಿಗಾರು ಜಿ.ಪಂ. ಕ್ಷೇತ್ರಕ್ಕೆ ಬಿಜೆಪಿಯ ಆಶಾ ತಿಮ್ಮಪ್ಪ, ಕಾಂಗ್ರೆಸ್‌ನ ವಿಮಲಾ ರಂಗಯ್ಯ, ಜೆಡಿಎಸ್‌ನಿಂದ ಸಾಹಿತ್ಯ ಮುಂಡೋಡಿ, ಜಾಲ್ಸೂರು ಜಿ.ಪಂ. ಕ್ಷೇತ್ರಕ್ಕೆ ಕಾಂಗ್ರೆಸ್‌ನ ಸರಸ್ವತಿ ಕಾಮತ್ ಮತ್ತು ಬಿಜೆಪಿ ಪುಷ್ಪಾವತಿ ಬಾಳಿಲ, ಅರಂತೋಡು ಜಿ.ಪಂ. ಕ್ಷೇತ್ರಕ್ಕೆ ಬಿಜೆಪಿಯ ಹರೀಶ್ ಕಂಜಿಪಿಲಿ, ಕಾಂಗ್ರೆಸ್‌ನ ಎಂ.ಮಾಧವ ಗೌಡ, ಜೆಡಿಎಸ್‌ನ ರಾಮಚಂದ್ರ ಬಳ್ಳಡ್ಕ, ಪಕ್ಷೇತರರಾಗಿ ಜಿ.ಎ.ಇಸ್ಮಾಯಿಲ್ ಮತ್ತು ಅನಿಲ್ ಬಳ್ಳಡ್ಕ ನಾಮಪತ್ರ ಸಲ್ಲಿಸಿದ್ದು ಅವರೆಲ್ಲರ ನಾಮಪತ್ರಗಳು ಕ್ರಮಬದ್ಧವಾಗಿದೆ.

ತಾ.ಪಂ. ಕ್ಷೇತ್ರಗಳಿಗೆ ಸಂಬಂಧಿಸಿ ಬೆಳ್ಳಾರೆ ಕ್ಷೇತ್ರಕ್ಕೆ ನಳಿನಾಕ್ಷಿ ನಾರಾಯಣ, ಲಲಿತಾ ಆನಂದ, ಶಾರದಾ ಎಸ್.ಕೆ. ದರ್ಖಾಸ್ತು ಮತ್ತು ಬೀಬಿ ನಯನ ಗೌರಿಹೊಳೆ, ಎಣ್ಮೂರು ಕ್ಷೇತ್ರಕ್ಕೆ ಶುಭದಾ ಎಸ್. ರೈ ಮತ್ತು ವನಿತಾಕುಮಾರಿ ಎಂ., ಪಂಜ ಕ್ಷೇತ್ರಕ್ಕೆ ಲೋಕೇಶ್ ಬರೆಮೇಲು, ಅಬ್ದುಲ್ ಗಫೂರ್, ಗುರುಪ್ರಸಾದ್, ದಾಮೋದರ ನೇರಳ, ಗುತ್ತಿಗಾರು ಕ್ಷೇತ್ರಕ್ಕೆ ಯಶೋದಾ ಬಾಳೆಗುಡ್ಡೆ, ಶಶಿಕಲಾ ಅಡ್ಡನಪಾರೆ, ಜ್ಯೋತಿ ಪ್ರೇಮಾನಂದ, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಾರಾಯಣ ಅಗ್ರಹಾರ, ಅಶೋಕ್ ನೆಕ್ರಾಜೆ, ರಮಾನಂದ ಎಣ್ಣೆಮಜಲು, ಭಾಸ್ಕರ ಕೊರಪ್ಪಣೆ, ಮಡಪ್ಪಾಡಿ ಕ್ಷೇತ್ರಕ್ಕೆ ಪಿ.ಸಿ.ಜಯರಾಮ, ಉದಯ ಕೆ.ಟಿ. ಮತ್ತು ವಿನೂಪ್ ಮಲ್ಲಾರ, ಐವರ್ನಾಡು ಕ್ಷೇತ್ರಕ್ಕೆ ರಾಧಾಕೃಷ್ಣ ಬೊಳ್ಳೂರು, ವೆಂಕಟ್ರಮಣ ಇಟ್ಟಿಗುಂಡಿ, ಅಶೋಕ್ ಚೂಂತಾರು, ಜಾಲ್ಸೂರು ಕ್ಷೇತ್ರಕ್ಕೆ ಗೋಪಿನಾಥ್ ಬೊಳುಬೈಲು, ತೀರ್ಥರಾಂ ಜಾಲ್ಸೂರು, ಸತೀಶ್ ಕೆಮನಬಳ್ಳಿ ಮತ್ತು ಕಲ್ಪನಾ ರಾವ್, ಅಜ್ಜಾವರ ಕ್ಷೇತ್ರಕ್ಕೆ ಚನಿಯ ಕಲ್ತಡ್ಕ ಮತ್ತು ರಾಮ ನೆಹರೂನಗರ, ನೆಲ್ಲೂರು ಕೆಮ್ರಾಜೆ ಕ್ಷೇತ್ರಕ್ಕೆ ವಿದ್ಯಾಲಕ್ಷ್ಮಿ ಎರ್ಮೆಟ್ಟಿ, ಚಂದ್ರಕಲಾ ಪ್ರಭಾಕರ ಮಂಜಿಕಾನ, ಅರಂತೋಡು ಕ್ಷೇತ್ರಕ್ಕೆ ಪುಷ್ಪಾ ಮೇದಪ್ಪ, ಹೇಮಲತಾ ಕೊಳಲುಮೂಲೆ, ಆಲೆಟ್ಟಿ ಕ್ಷೇತ್ರಕ್ಕೆ ಸುಲೋಚನಾ ಪಾವಳಿಕಜೆ, ಪದ್ಮಾವತಿ ಕುಡೆಂಬಿ, ಬಾಳಿಲ ಕ್ಷೇತ್ರಕ್ಕೆ ಜಾಹ್ನವಿ ಕಾಂಚೋಡು ಮತ್ತು ಪ್ರವೀಣ ಪಿ. ರೈ ಮರುವಂಜ ನಾಮಪತ್ರ ಸಲ್ಲಿಸಿದ್ದು, ಅವರೆಲ್ಲರ ನಾಮಪತ್ರ ಕ್ರಮಬದ್ಧವಾಗಿದೆ. ನಾಮಪತ್ರ ಹಿಂತೆಗೆಯಲು ಇನ್ನೆರಡು ದಿನಗಳ ಕಾಲಾವಕಾಶ ಇದೆ. ಆ ಬಳಿಕವಷೇ ಚುನಾವಣ ಕಣದಲ್ಲಿ ಉಳಿಯುವವರ ಸ್ಪಷ್ಟ ವಿವರ ಲಭ್ಯವಾಗಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X