Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇದು ಸರ್ವಾಧಿಕಾರಿ ಹಿಟ್ಲರನ ರೋಚಕ ಪ್ರೇಮ...

ಇದು ಸರ್ವಾಧಿಕಾರಿ ಹಿಟ್ಲರನ ರೋಚಕ ಪ್ರೇಮ ಕತೆ!

ವಾರ್ತಾಭಾರತಿವಾರ್ತಾಭಾರತಿ9 Feb 2016 7:26 PM IST
share
ಇದು  ಸರ್ವಾಧಿಕಾರಿ ಹಿಟ್ಲರನ ರೋಚಕ ಪ್ರೇಮ ಕತೆ!

ಅಡಾಲ್ಫ್ ಹಿಟ್ಲರ್‌ನ ಹೆಸರು ಕೇಳದಿದ್ದವರಿರಲಾರು. ಅವನು ಸರ್ವಾಧಿಕಾರಿ ಹಾಗೂ ಕ್ರೌರ್ಯಕ್ಕೆ ಪರ್ಯಾಯ ಹೆಸರಾಗಿದ್ದ. ಆದರೆ ಇದೇ ವ್ಯಕ್ತಿಯ ಖಾಸಗಿ ವಿಚಾರ ಬೇರೆಯೂ ಇದೆ. ಅವನ ಹೃದಯದಲ್ಲಿ ಪ್ರೀತಿ ಕೂಡ ಹರಿದಾಡುತ್ತಿತ್ತು.ಇವಾ ಬ್ರೌನ್ ಎಂಬ ಮಹಿಳೆ ಜರ್ಮನಿಯ ಈ ಸರ್ವಾಧಿಕಾರಿಯನ್ನು ಸಮ್ಮೋಹಕಗೊಳಿಸಿದ್ದವಳು. ಹಿಟ್ಲರ್‌ನಂತಹ ದೈತ್ಯನ ಮನಸು ಕದಿಯುವುದೆಂದರೆ ಚಿಕ್ಕ ವಿಷಯವಲ್ಲ. ಆದರೆ ಅವಳು ಕದ್ದಿದ್ದಳು! ಅವಳಿಗಿಂತ ಮೊದಲು ಹಿಟ್ಲರ್‌ನಿಗೆ ಎರಡು ಅಫೇರ್‌ಗಳಿದ್ದವು. ಗೆಲಿ ರಾಬಲ್ ಹಾಗೂ ಅರ್ನಾ ಹೇಸ್ಟಿಂಗ್ಸ್‌ರ ಜೊತೆ ಅವನು ಸಂಪರ್ಕ ಇಟ್ಟುಕೊಂಡಿದ್ದ.

                                                                                               

ಜರ್ಮನಿಯ ಮ್ಯೂನಿಚ್‌ನಲ್ಲಿ 1912 ಫೆ.6ರಂದು ಹುಟ್ಟಿದ್ದ ಇವಾ ಮಾಡೆಲ್ ಆಗಿದ್ದಳು. ಅವರಿಬ್ಬರು 1929ರಲ್ಲಿ ಮ್ಯೂನಿಚ್‌ನಲ್ಲಿ ಹಾಫ್‌ಮೈನ್ಸ್ ಸ್ಟುಡಿಯೋದಲ್ಲಿ ಪ್ರಥಮವಾಗಿ ಭೇಟಿಯಾಗಿದ್ದರು. ಆದರೆ ಜರ್ಮನಿಯ ಜನರಿಗೆ ಈ ಸಂಬಂಧದ ಕುರಿತು ಸ್ವಲ್ಪವೂ ಗೊತ್ತಿರಲಿಲ್ಲ. ಅವರಿಬ್ಬರಲ್ಲಿ ಹದಿನಾಲ್ಕು ವರ್ಷಗಳವರೆಗೆ ಸಂಬಂಧ ಮುಂದುವರಿದಿತ್ತು.

ಎಲ್ಲ ಪ್ರೇಮ ಕತೆಗಳಂತೆ ಅವರ ಪ್ರೇಮದಲ್ಲಿಯೂ ಏರು ಪೇರು ಇದ್ದೇ ಇತ್ತು. ಇವಾ ಆತ್ಮಹತ್ಯೆ ಮಾಡಲು ಎರಡು ಬಾರಿ ಯೋಚಿಸಿದ್ದಳನ್ನೆಲಾಗಿದೆ. 1931ರಲ್ಲಿ ಗೆಲಿ ರಾಬಲ್‌ಳು ನಿಧನಾನಂತರ ಹಿಟ್ಲರ್ ನಿರುತ್ಸಾಹಗೊಂಡಿದ್ದ. ಇದರ ಪ್ರಭಾವ ಇವಾಳ ಮೇಲೆಯೂ ಆಗಿತ್ತು. ಇವಾ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೂ ಹಿಟ್ಲರನಲ್ಲಿ ಜಿಗುಪ್ಸೆಗೆ ಕಾರಣವಾಗಿತ್ತು. 1930-1940ರ ನಡುವೆ ಹಿಟ್ಲರ್‌ನ ಮನೆಯನ್ನು ಇವಾಳೇ ನೋಡಿಕೊಳ್ಳುತ್ತಿದ್ದಳು. ಇಬ್ಬರೂ ಜೊತೆಯಾಗಿ ಪಾರ್ಟಿ ಮಾಡಿಕೊಳ್ಳುತ್ತಿದ್ದರು. ಯುರೋಪ್‌ನಲ್ಲಿ ವಿಧ್ವಂಸಕಾರಿ ಸ್ಥಿತಿ ನಿರ್ಮಾಣವಾದ ಮೇಲೆ ಅವರಿಬ್ಬರೂ ಒಂಟಿಯಾಗಿ ಬಿಟ್ಟಿದ್ದರು. ಇಬ್ಬರೂ ಬರ್ಚ್‌ಸಗೆಡನ್‌ನ ತಮ್ಮ ಮನೆಯಲ್ಲಿ ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು.

ಹಿಟ್ಲರ್ ತನ್ನಸ್ಟಡೀ ರೂಮ್‌ನಲ್ಲಿ ಇವಾಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದ. ಸಂಘರ್ಷ ವಾತಾವರಣ ಹೆಚ್ಚಳಗೊಂಡ ನಂತರ 29 ಎಪ್ರಿಲ್ 1944ರಲ್ಲಿ ಇವಾಳೊಂದಿಗೆ ರೆಚ್‌ಚಾನ್ಸೆಲರಿ ಬಂಕರ್‌ನಲ್ಲಿ ವಾಸಿಸತೊಡಗಿದ. 1945ರಲ್ಲಿ ಹಿಟ್ಲರ್ ಬಂಕರ್‌ನೊಳಗೆ ಇವಾಳೊಂದಿಗೆ ಮದುವೆಯಾದ. ಅವಳಿಗೆ ಪತ್ನಿಯ ಸ್ಥಾನವನ್ನು ಕೊಟ್ಟ. ಮದುವೆ ಪಾರ್ಟಿಯಾಗಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಮದುವೆ ಕೇವಲ 46ಗಂಟೆ ಮಾತ್ರ ಉಳಿದಿತ್ತು.

1945 ಎಪ್ರಿಲ್ 30ರಂದು ತನ್ನ ಕೆಲಸಗಾರರಿಗೆ ಮಧ್ಯಾಹ್ನದ ಒಂದು ಗಂಟೆವೇಳೆ ಕೊನೆಯ ವಿದಾಯ ಹೇಳಿದ್ದ. ಸ್ವಲ್ಪಹೊತ್ತಿನ ನಂತರ ಗುಂಡು ಹಾರಾಟದ ಸದ್ದು ಕೇಳಿಸಿತ್ತು. ಬಾಗಿಲು ತೆರೆದಾಗ ಇವಾ ಮತ್ತು ಹಿಟ್ಲರ್ ಸತ್ತು ಬಿದ್ದಿದ್ದರು. ಹಿಟ್ಲರ್ ಗುಂಡು ಹಾರಿಸಿಕೊಂಡಿದ್ದರೆ, ಇವಾ ಸಯನೈಡ್ ಸೇವಿಸಿ ಸತ್ತಿದ್ದಳು. ಇದು ಇಪ್ಪತ್ತನೆ ಶತಮಾನದ ರೋಮಾಂಚಕ ಪ್ರೇಮ ಕತೆಗಳಲ್ಲೊಂದಾಗಿದೆ. ಕ್ರೂರಿ ಸರ್ವಾಧಿಕಾರಿಯೊಳಗಿದ್ದ ಪ್ರೇಮ ಕತೆ ಹೀಗೆ ಕೊನೆಗೊಂಡಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X