ಕೊಣಾಜೆ: ಮಟ್ಕಾ ದಂಧೆ ಆರೋಪಿಯ ಬಂಧನ

ಕೊಣಾಜೆ: ಕೊಣಾಜೆ ಠಾಣಾ ವ್ಯಾಪ್ತಿಯ ನರಿಂಗಾನದ ತೌಡುಗೋಳಿ ಬಳಿ ಮಟ್ಕಾದಂಧೆ ನಡೆಸುತ್ತಿದ್ದ ಆರೋಪಿಯೊರ್ವನನ್ನು ಕೊಣಾಜೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಜೇಶ್ವರ ಬಾಬು ಬೆಳ್ಚಪ್ಪಾಡ ಎಂಬವರ ಪುತ್ರ ಕುಮಾರ್ (52) ಎಂದು ಗುರುತಿಸಲಾಗಿದೆ. ಈತ ನರಿಂಗಾನ ಗ್ರಾಮದ ತೌಡುಗೋಳಿ ಬಳಿ ಮಟ್ಕಾ ದಂಧೆಯನ್ನು ನಡೆಸುತ್ತಿದ್ದ ಮಾಹಿತಿ ಪಡೆದ ಕೊಣಾಜೆ ಇನ್‌ಸ್ಪೆಕ್ಟರ್ ಅಶೋಕ್, ಪಿ.ಎಸ್.ಐ ಸುಧಾಕರ್ ನೇತೃತ್ವದ ಪೊಲೀಸರ ತಂಡ ಮಟ್ಕಾದಂಧೆ ಆರೋಪಿ ಕುಮಾರ್‌ನನ್ನು ಬಂಧಿಸಿ ಮಟ್ಕಾ ಚೀಟಿ, ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





