ಫೆ. 12: ಅಲಂಗಾರು ಶ್ರೀ ಅಯ್ಯ ಸ್ವಾಮಿ ಮಠದಲ್ಲಿ ಆರಾಧನಾ ಉತ್ಸವ
ಮೂಡಬಿದಿರೆ, ಫೆ.9: ಅಲಂಗಾರು ಜಗದ್ಗುರು ಶ್ರೀ ಅಯ್ಯ ಸ್ವಾಮಿ ಮಠದಲ್ಲಿ ಫೆ.12ರಂದು ಶ್ರೀ ಗುರು ಆರಾಧನಾ ಉತ್ಸವವು ನಡೆಯಲಿದೆ.
ಗುರುವಾರ (ಫೆ.11) ನವಗ್ರಹ ಪ್ರತಿಷ್ಠಾ ದಿನಾಚರಣೆ, ಸಹಸ್ರ ಮೃತ್ಯುಂಜಯ ಯಜ್ಞ, ಸಂಜೆಯಿಂದ ಮರುಮುಂಜಾನೆಯವರೆಗೆ ಭಜನೆ, ಶುಕ್ರವಾರ (ಫೆ.12) ಬೆ.ಗಂ. 9 ಗಂಟೆಗೆ ಗುರುದೇವರಿಗೆ ಪಂಚಾಮೃತಾಭಿಷೇಕ, ಮಧ್ಯಾಹ್ನ 11ಕ್ಕೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಸಂದರ್ಶನ, ಮಠಕ್ಕೆ ಪುನರಾಗಮನ, ಮಹಾ ಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬೆ. ಗಂ.11ರಿಂದ 12.30ರವರೆಗೆ ಕುಂಜೂರು ಗಣೇಶ ಆಚಾರ್ಯ ಬಳಗದವರಿಂದ ‘ಸ್ವರ್ಣ ಮೇಧಿನಿ’ ಯಕ್ಷಗಾನ ತಾಳಮದ್ದಳೆ ಏರ್ಪಡಿಸಲಾಗಿದೆ.
Next Story





