ಪ್ರಹಸನವಾದ ಸೇನಾಘನತೆ-ಹಿರಿಯ ಯೋಧರ ಕಿಡಿ

ಸೇನಾ ಸಂಗೀತಗಾರರು ಜನಪ್ರಿಯ ಸಂಗೀತ ನುಡಿಸಬೇಕಿದ್ದರೆ ಸ್ವರ ಸಮ್ಮೇಳನ ಗಳಲ್ಲಿ ನುಡಿಸಲಿ, ಬೀಟಿಂಗ್ ರಿಟ್ರೀಟ್‌ಗಳಲ್ಲಿ ಅಲ್ಲ
ಭಾರತೀಯ ಸೇನೆಯ ಔಪಚಾರಿಕ ಸಾರ್ವಜನಿಕ ಸಮಾರಂಭದಲ್ಲಿ ಸರಣಿ ಬದಲಾವಣೆಗಳನ್ನು ತರಲಾಗಿದ್ದು, ಇದಕ್ಕೆ ಹಿರಿಯ ಯೋಧರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದು ಮಿಲಿಟರಿ ಕಾರ್ಯ ಕ್ರಮದ ಔಪಚಾರಿಕತೆ ಹಾಗೂ ಘನತೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಅಂತಾರಾಷ್ಟ್ರೀಯ ನೌಕಾ ಪರಾಮರ್ಶೆ ಉದ್ಘಾಟನಾ ಸಮಾರಂಭ. ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪಾಲ್ಗೊಂಡಿದ್ದ ಸಮಾರಂಭ ವಿಶಾಖಪಟ್ಟಣಂ ಸಮುದ್ರತೀರದಲ್ಲಿ ನಡೆಯಿತು.
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ ಪಾರಿಕ್ಕರ್, ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಮುಖ್ಯಸ್ಥರಾದ ದಲ್ಬೀರ್ ಸಿಂಗ್ ಸುಹಾಗ್, ಏರ್ ಚೀಫ್ ಮಾರ್ಷಲ್ ಅರೂಪ್ ರಹಾ, ಅಡ್ಮಿರಲ್ ರಾಬಿನ್ ಧೋವಾನ್ ಅವರೂ ಐಎನ್‌ಎಸ್ ಸುಮಿತ್ರಾದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದನ್ನು ಸಮಾರಂಭಕ್ಕಾಗಿ ರಾಷ್ಟ್ರಪತಿ ನೌಕೆಯಾಗಿ ಪರಿವರ್ತಿಸಲಾಗಿತ್ತು.
ಬೇರೆ ಏನಿತ್ತು?
ಚಲಿಸುವ ಹಡಗಿನಲ್ಲಿ ರಾಷ್ಟ್ರಪತಿ, 92 ನೌಕೆಗಳ ಪರಾಮರ್ಶೆ ನಡೆಸಿ ದರು. ಇದರಲ್ಲಿ 21 ದೇಶಗಳಿಂದ ಆಗಮಿಸಿದ್ದ 21 ವಿದೇಶಿ ನೌಕೆಗಳೂ ಇದ್ದವು. ಅಕ್ಷಯ್ ಕುಮಾರ್ ಅವರು ಸೇನಾ ಮುಖ್ಯಸ್ಥ ಜನರಲ್ ಸುಹಾಗ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅಕ್ಷಯ್ ಕುಮಾರ್‌ರ ಮಗನ ಕಿವಿ ಹಿಂಡಿದರು. ಇದನ್ನು ಅಕ್ಷಯ್ ಸಾಮಾಜಿಕ ವೆಬ್‌ಸೈಟ್ ಇನ್‌ಸ್ಟಾಗ್ರಾಂನಲ್ಲಿ ಹೆಮ್ಮೆಯಿಂದ ಪೋಸ್ಟ್ ಮಾಡಿದರು.
ಹಿಂದಿನ ಸಂಜೆ ಭಾರತೀಯ ನೌಕಾಪಡೆಯ ಭೂನೆಲೆಯಾದ ಐಎನ್‌ಎಸ್ ಸಾತವಾಹನದಲ್ಲಿ ಬಾಲಿವುಡ್ ನಟಿ ಕಂಗನಾ ರಾವುತ್ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ಧವನ್ ಮತ್ತು ಪೂರ್ವ ನೌಕಾ ಕಮಾಂಡ್ ಮುಖ್ಯಸ್ಥ ವೈಸ್ ಅಡ್ಮಿರಲ್ ಸತೀಶ್ ಸೋನಿ ಜತೆ ವೇದಿಕೆ ಹಂಚಿಕೊಂಡರು.ಅಕ್ಷಯ್ ಹಾಗೂ ಕಂಗಾನಾ ಅವರನ್ನು ನೌಕಾಪಡೆಯ ಐಎಫ್‌ಆರ್-2016ರ ರಾಯಭಾರಿಗಳಾಗಿ ನೇಮಕ ಮಾಡಲಾಯಿತು.
ಈ ಸಮಾರಂಭದಲ್ಲಿ ಭಾಗವಹಿಸಿದ ವಿದೇಶಿ ನೌಕಾ ಸಿಬ್ಬಂದಿಗಾಗಿ ಬಾಲಿವುಡ್ ಸಂಗೀತಕ್ಕೆ ಶ್ಯಾಮಕ್ ದಾವರ್ ಡ್ಯಾನ್ಸ್ ತಂಡ ಹೆಜ್ಜೆ ಹಾಕಿತು.
ಮುಂದಿನ ವರ್ಷ ಬಾರ್‌ಗರ್ಲ್‌ಗಳನ್ನು ಕರೆಸಬಹುದು ಎಂದು ಮಿಲಿಟ ರಿಯ ಬಾಲಿವುಡ್ಡೀಕರಣ ಬಗ್ಗೆ ಪೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟಿಂಗ್‌ಗೆ ಮಾಜಿ ಸೈನಿಕ ಅರುಣ್ ಗೋವಿಲ್ ಆಕ್ರೋಶ ವ್ಯಕ್ತಪಡಿಸಿದರು.
ಭಾರತದಲ್ಲಿ ಅಂತಾರಾಷ್ಟ್ರೀಯ ನೌಕಾ ಪರಾಮರ್ಶೆ 15 ವರ್ಷಗಳ ಬಳಿಕ ನಡೆದಿತ್ತು. ಸಂದರ್ಶಕ ನೌಕಾ ಸಿಬ್ಬಂದಿಯನ್ನು ಗೌರವಾನ್ವಿತ ಅತಿಥಿಗಳು ಎಂದು ಪರಿಗಣಿಸಿ, ಭಾರತ ಸಂಸ್ಕೃತಿಯ ತುಣುಕುಗಳನ್ನು ಪ್ರದರ್ಶಿಸುವುದು ನಮ್ಮ ಉದ್ದೇಶವಾಗಿತ್ತು. ಇಲ್ಲಿ ದಾವರ್ ಪ್ರದರ್ಶನ ಮಾತ್ರ ಇದ್ದಿರಲಿಲ್ಲ. ಕೂಚುಪುಡಿಯಂಥ ಶಾಸ್ತ್ರೀಯ ನೃತ್ಯವೂ ಇತ್ತು ಎಂದು ನೌಕಾಪಡೆ ಮೂಲಗಳು ಹೇಳಿವೆ.
ಇಡೀ ದಿನದ ಪರಿಶ್ರಮ ಹಾಗೂ ದಣಿವಿನಿಂದ ವಿಶ್ರಾಂತಿ ಪಡೆಯು ವುದು ಹಾಗೂ ಮರುದಿನದ ಮಾಮೂಲಿ ಕರ್ತವ್ಯದ ಮುನ್ನ ಮನಸ್ಸಿಗೆ ಮುದ ಅಗತ್ಯ. ಈ ಸಮಾರಂಭ ಭಾರತೀಯ ನೌಕಾಪಡೆಯ ಸಾಮರ್ಥ್ಯ ವನ್ನು ಪ್ರದರ್ಶಿಸಿದೆ ಎಂದು ಮೂಲಗಳು ಹೇಳಿವೆ. ಹಿಂದಿನ ಕಾರ್ಯಕ್ರ ಮಗಳಿಗೇ ಜೋತುಬೀಳದೆ, ಸಾಗರ ಕಮಾಂಡೋಗಳ ಪ್ರದರ್ಶನ, ವಾಟರ್ ಸ್ಕೈಯಿಂಗ್ ಹಾಗೂ ಯುದ್ಧವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಮೇಲಾಟ ಕೂಡಾ ಇತ್ತು ಎನ್ನುವುದು ಅವರ ಸಮರ್ಥನೆ.
ರಾಷ್ಟ್ರಪತಿ ನೌಕೆ ಪರಾಮರ್ಶೆಗಾಗಿ ನಡುವೆ ಹಾದು ಹೋಗುತ್ತಿದ್ದಂತೆ ಭವ್ಯ ಅಲಂಕೃತ ನೌಕೆಗಳು ರಾಷ್ಟ್ರಪತಿಗೆ ವಂದನೆ ಸಲ್ಲಿಸಿದವು. ಪ್ರತಿ ನೌಕೆಗಳಿಗೆ ಆ ನೌಕೆಯ ಕಂಪೆನಿಯ ಹೆಸರು ಇಡಲಾಗಿತ್ತು. ಸಾಂಪ್ರದಾಯಿಕ ಶ್ವೇತ ಸಮವಸ್ತ್ರದಿಂದ ಶೃಂಗರಿಸಲಾಗಿತ್ತು. ಅಭಿವಂದನೆಯ ಆ ಕ್ಷಣ ಕಣ್ಣಿಗೆ ಕಟ್ಟುವಂತಿತ್ತು ಎಂದು ನೌಕಾಪಡೆ ಸಮಾರಂಭವನ್ನು ಬಣ್ಣಿಸಿದೆ.
ಇದು ಭಾರತೀಯ ನೌಕೆ ರಾಷ್ಟ್ರಪತಿಗಳಿಗಾಗಿ ಆಯೋಜಿಸಿದ್ದ ಹನ್ನೊಂದನೆ ನೌಕಾ ಪರಾಮರ್ಶೆ ಸಮಾರಂಭವಾಗಿತ್ತು ಹಾಗೂ ಎರಡನೆ ಅಂತಾ ರಾಷ್ಟ್ರೀಯ ಸಮಾರಂಭ. ಅಂತಾರಾಷ್ಟ್ರೀಯ ನೌಕಾ ಪರಾಮರ್ಶೆ ಯುದ್ಧೋತ್ಸಾಹ ರಹಿತವಾದ ವಿದೇಶಿ ಯುದ್ಧನೌಕೆಗಳ ಸಮಾಗಮ ಎಂದು ನೌಕಾಪಡೆಯ ಕರಪತ್ರ ವಿವರಿಸುತ್ತದೆ.
2001ರಲ್ಲಿ ನಡೆದ ಮೊಟ್ಟಮೊದಲ ಐಎಫ್‌ಆರ್‌ನಲ್ಲಿ 29 ವಿದೇಶಿ ನೌಕೆಗಳು ಭಾಗವಹಿಸಿದ್ದರೆ ಈ ಬಾರಿ ಕೇವಲ 24 ಭಾಗ ವಹಿಸಿವೆ. ನೌಕಾಪಡೆಯ ಪ್ರತಿನಿಧಿತ್ವ 54 ಇದ್ದು, ಕಳೆದ ಬಾರಿಗಿಂತ ಹೆಚ್ಚಾಗಿತ್ತು. ಬಹುತೇಕ ವಿದೇಶಿ ನೌಕಾಪಡೆಗಳು ನಿಯೋಗಗಳನ್ನು ಕಳುಹಿಸಿದ್ದವೇ ವಿನಃ ನೌಕೆಗಳನ್ನು ಕಳುಹಿಸಿರಲಿಲ್ಲ. ಭಾರತೀಯ ನೌಕಾಪಡೆ ಚೀನಿ ನೌಕಾಪಡೆಗೆ ಎರಡು ಕಾವಲು ಹಡಗಿನ ಆತಿಥ್ಯ ನೀಡಿದ್ದು, ಅಂಥ ಸಮಾರಂಭ ಇದೇ ಮೊದಲು.
ಪಾಕಿಸ್ತಾನವನ್ನೂ ಇದಕ್ಕೆ ಆಹ್ವಾನಿಸಲಾಗಿತ್ತಾದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಸಮಾರಂಭ ನಡೆಸಿದ ಸ್ಥಳ 1971ರ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಸಬ್‌ಮೆರಿನ್ ಪಿಎನ್‌ಎಸ್ ಘಾಜಿಯನ್ನು ಧ್ವಂಸಗೊಳಿಸಿದ ಸ್ಥಳವಾಗಿದೆ.
ಇದು ಹೇಗೆ ಸಂಭವಿಸಿತು ಎಂಬ ಬಗ್ಗೆ ವಿಭಿನ್ನ ವಾದಗಳಿವೆ. ಭಾರ ತೀಯ ನೌಕಾಪಡೆಯ ಡೆಪ್ತ್ ಚಾರ್ಜರ್‌ಗಳು ಇದನ್ನು ಮುಳುಗಿಸಿದವು ಎಂದು ಕೆಲವರು ಹೇಳಿದರೆ, ಕರಾವಳಿಯ ಬಗ್ಗೆ ಮ್ಯಾಪಿಂಗ್ ಹೊಂದಿಲ್ಲದ ಕಾರಣದಿಂದ ಅದು ನೆಲಕ್ಕೆ ಢಿಕ್ಕಿಯಾಯಿತು ಎಂದು ಮತ್ತೆ ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ಆ ಸಬ್‌ಮೆರಿನ್ ಅವಶೇಷಗಳು ವಿಶಾಖಪಟ್ಟಣಂನ ಹೊರಗೆ ತೇಲಿಬರುವವರೆಗೂ ಭಾರತದ ನೌಕಾಪಡೆಗೆ ಪಾಕಿಸ್ತಾನಿ ಸಬ್‌ಮೆರಿನ್ ಧ್ವಂಸದ ವಿಷಯ ಗೊತ್ತಾಗಿರಲಿಲ್ಲ.
ಭಾರತದ ಸೇನಾ ಶಕ್ತಿ ಹಾಗೂ ಭಾರತೀಯ ಸಂಸ್ಕೃತಿಯ ಹೊರತಾಗಿ, ಹಿರಿಯ ಯೋಧರು ಕುಪಿತರಾಗಿರುವುದು ಜನವರಿ 29ರಂದು ನಡೆದ ಬೀಟಿಂಗ್ ರಿಟ್ರೀಟ್ ಬಗೆಗೆ. ಸಾಂಪ್ರದಾಯಿಕವಾಗಿ ಇದು ಆ ದಿನದ ಯುದ್ಧವನ್ನು ಮುಗಿಸಿ ಸೇನೆಗಳು ಶಿಬಿರಕ್ಕೆ ಮರಳುವಾಗ ಮೃತಪಟ್ಟ ಹಾಗೂ ಗಾಯಾಳು ಸೈನಿಕರನ್ನು ಕರೆತರುವ ಶಿಷ್ಟಾಚಾರ. ಭಾರತದಲ್ಲಿ ಈ ಬೀಟಿಂಗ್ ರಿಟ್ರೀಟ್ ಸಾಮಾನ್ಯವಾಗಿ ಗಣರಾಜ್ಯ ದಿನದ ಸಮಾರಂಭದ ಸೇನಾ ಕಾರ್ಯಕ್ರಮಗಳ ಮುಕ್ತಾಯವನ್ನು ಸೂಚಿಸುತ್ತದೆ.
ಈ ವರ್ಷ ಬೀಟಿಂಗ್ ರಿಟ್ರಿಟ್‌ನಲ್ಲಿ, ಯುದ್ಧೇತರ ಉದ್ದೇಶದ ಸಂಗೀತ ವಾದ್ಯಗಳನ್ನು ಸೇರಿಸಲಾಗಿತ್ತು. ಸಿತಾರ್ ಹಾಗು ತಬಲಾವನ್ನು ಸಮವಸ್ತ್ರ ಧರಿಸಿ ಯೋಧರು ನುಡಿಸಿದರು. ರ್ಯಾಂಪ್‌ಗಳ ಸಾಲಿನಲ್ಲಿ ಅವರು ಕುಳಿತಿದ್ದರು. ಮೃತರ ಗೌರವಾರ್ಥ ಯೋಧವಾದ್ಯಗಳನ್ನು ನುಡಿಸುತ್ತಾ ಪಥ ಸಂಚಲನ ನಡೆಸುವುದು ಸೇನೆಯ ರೂಢಿ. ಈ ಮೂಲಕ ಉಳಿದ ಸೈನಿಕರಿಗೆ ಭವಿಷ್ಯದ ಕಠಿಣತೆಗಳಿಗೆ ಹೊಂದಿಕೊಳ್ಳಲು ಹುರಿದುಂಬಿಸುವುದು ಉದ್ದೇಶ. ಇದಕ್ಕೆ ವ್ಯತಿರಿಕ್ತವಾಗಿ ಈ ಬಾರಿ ಇತರ ವಾದ್ಯಗಳನ್ನು ನುಡಿಸಲಾಯಿತು.
ಸೇನೆಯ ನಿವೃತ್ತ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ವಿಜಯ್‌ಒಬೆರಾಯ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿ, ಸೇನೆಗಳ ಮುಖ್ಯಸ್ಥರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ‘ಮಾನ್ಯರೇ, ನನಗೆ ಭ್ರಮನಿರಸನ ಹಾಗೂ ಆಘಾತವಾಗಿದೆ’ ಎಂಬ ಶೀರ್ಷಿಕೆಯಡಿ ಪತ್ರ ಬರೆದಿದ್ದಾರೆ.
1965ರ ಪಾಕಿಸ್ತಾನ ಜತೆಗಿನ ಯುದ್ಧದಲ್ಲಿ ಕಾಲು ಕಳೆದುಕೊಂಡಿರುವ ಒಬೆರಾಯ್, 2000-2001ರಲ್ಲಿ ಸೇನೆಯ ಉಪ ಮುಖ್ಯಸ್ಥರಾಗಿ ಭಡ್ತಿ ಪಡೆದವರು. ಯುದ್ಧ ಗಾಯಾಳು ಸೈನಿಕರ ಸಂಘದ ಮುಖ್ಯಸ್ಥ. ಬೀಟಿಂಗ್ ರಿಟ್ರೀಟ್ ಸಮಾರಂಭ ಒಂದು ಬಗೆಯ ತಮಾಷೆಯಾಗಿ ಪರಿವರ್ತನೆ ಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಸಂಪ್ರದಾಯಗಳು ಭಾರತೀಯ ಸೇನೆಯ ತಿರುಳು. ಅವುಗಳ ವೌಲ್ಯದಬಗ್ಗೆ ನಾನು ನಿಮಗೆ ನೆನಪಿಸಬೇಕಾಗಿಲ್ಲ. ಯವುದೋ ರಾಜಕೀಯ ಒತ್ತಡ/ ಮನವಿಗೆ ಮಣಿದು ಅದನ್ನು ಗಾಳಿಗೆ ತೂರುವುದುನೀವು ನೇತೃತ್ವ ವಹಿಸಿದ ಪಡೆಗಳನ್ನು ಕೀಳಾಗಿ ಪರಿಗಣಿಸಿದಂತೆ ಎಂದು ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಹಿರಿಯ ಅಧಿಕಾರಿಗಳು ಏನು ಹೇಳಿದರೂ ಸೈನಿಕರು ಪಾಲಿಸುತ್ತಾರೆ. ಆದರೆ ಈ ಆದೇಶಗಳು ಕಾನೂನುಸಮ್ಮತ ಮತ್ತು ನ್ಯಾಯಬದ್ಧ ಎಂಬ ಕಾರಣಕ್ಕೆ ಮಾಡುತ್ತಾರೆ. ಆದರೆ ತಮ್ಮ ಮೇಲಧಿಕಾರಿಗಳನ್ನು ಖುಷಿಪಡಿಸುವ ಸಲುವಾಗಿ ಅಲ್ಲ ಎನ್ನುವುದನ್ನು ಗಮನಿಸ ಬೇಕು ಎಂದು ಹೇಳಿದ್ದಾರೆ.
ಸೇನಾ ಸಂಗೀತಗಾರರು ಜನಪ್ರಿಯ ಸಂಗೀತ ನುಡಿಸಬೇಕಿದ್ದರೆ ಸ್ವರ ಸಮ್ಮೇಳನ ಗಳಲ್ಲಿ ನುಡಿಸಲಿ, ಬದಲಾಗಿ ಬೀಟಿಂಗ್ ರಿಟ್ರೀಟ್ ಗಳಲ್ಲಿ ಅಲ್ಲ ಎಂದು ಕಿವಿಮಾತು ಹೇಳಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನಿವೃತ್ತ ಸೈನಿಕರ ಪಥ ಸಂಚಲನಕ್ಕೆ ಅವಕಾಶ ನೀಡದೇ ಇದ್ದ ಬಗ್ಗೆಯೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಾರದ ಏಕ ಶ್ರೇಣಿ- ಏಕ ಪಿಂಚಣಿ ಅಧಿಸೂಚನೆ ಯನ್ನು ಹೊರಡಿಸಿದ ಮೋದಿ ಆಡಳಿತಕ್ಕೆ ಇದು ನಿರ್ದಿಷ್ಟವಾಗಿ ಭಾವನಾತ್ಮಕ ವಿಷಯವಾಗಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ನೀವು ನಿಮ್ಮ ಬಾಸ್‌ಗಳಿಗೆ ಬದ್ಧತೆ ಪ್ರದರ್ಶಿಸಬಹುದು. ಆದರೆ ಏಕೆ ಜೀ ಹುಜೂರ್‌ಗಳಾಗುತ್ತಿದ್ದೀರಿ? ನೀವು ಇಂದು ಈ ಅತ್ಯುನ್ನತ ಹುದ್ದೆಗೆ ಏರಬೇಕಿದ್ದರೆ ಭಾಗಶಃ ನಿಮ್ಮ ಕಾಮ್ರೇಡ್‌ಗಳ ಕೊಡುಗೆಯೂ ಇದೆ ಎನ್ನುವುದನ್ನು ಮರೆಯಬೇಡಿ ಎಂದು ಒಬೆರಾಯ್ ಸೂಚ್ಯವಾಗಿ ಹೇಳಿದ್ದಾರೆ.







