ವೌಢ್ಯ ನಿಷೇಧ ಕಾನೂನು ಜಾರಿಗೆ ಹಿಂಜರಿಕೆ ಏಕೆ?
ಸರಕಾರ ವೌಢ್ಯ ನಿಷೇಧ ಕಾನೂನನ್ನು ಯಾವಾಗ ಜಾರಿ ತರುವುದು? ಅದಕ್ಕೂ ಜಾತಕ ನೋಡಬೇಕೇ? ಅನಕ್ಷರಸ್ಥರೂ, ಬಡವರೂ ತೀರಾ ಹಿಂದುಳಿದವರೂ, ದಲಿತರೂ ಈ ಜಂಜಾಟಕ್ಕೆ ಸಿಲುಕಿ ಒದ್ದಾಡುವುದನ್ನು ಇನ್ನೆಷ್ಟು ದಿನ ನಾವು ಸಹಿಸುವುದು? ದೃಶ್ಯ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿಯೂ ಬರುವ ಸಮಾಚಾರವನ್ನು ಈ 20ನೆ ಶತಮಾನದಲ್ಲಿಯೂ ನಾವು ನೋಡುತ್ತಿದ್ದೇವೆಂದರೆ ನಾವಿನ್ನೂ ಶಿಲಾಯುಗದಲ್ಲಿದ್ದೇವೆಯೇ? ಎಂದು ಭಾಸವಾಗದಿರದು. ಅಜ್ಞಾನ ತೊಲಗಿದೆ. ವಿಜ್ಞಾನ ಬೆಳೆದಿದೆ. ಈಗ ಕಂಪ್ಯೂಟರ್ ಯುಗ, ವಿಜ್ಞಾನದಲ್ಲಿ ನಾವು ಎಷ್ಟು ಮುಂದುವರಿದಿದ್ದೇವೆಂದರೆ ಮಂಗಳ ಗ್ರಹಕ್ಕೆ ಕಾಲಿಡಲು ಮನುಷ್ಯ ಹಂಬಲಿಸುತ್ತಿದ್ದಾನೆ. ಅಂತಹದರಲ್ಲಿ, ಇನ್ನೂ ವೌಢ್ಯವನ್ನು ಪೋಷಿಸಿ ಬೆಳೆಸುವುದು ಸರಿಯೇ?, ಈ ಜೇಡರ ಬಲೆಯಿಂದ ಪ್ರಜೆಗಳನ್ನು ರಕ್ಷಿಸುವುದು ಸರಕಾರದ ಕರ್ತವ್ಯವಲ್ಲವೇ? ಯಾಕೆ ಈ ಮೀನಾಮೇಷ, ಏಕೆ ಇಷ್ಟು ಹಿಂಜರಿಕೆ?
Next Story





