ಅಲೋಶಿಯಸ್ ಕಾಲೇಜು ಪತ್ರಿಕೋದ್ಯಮ ವಿಭಾಗದಿಂದ ಮರಕಡ ಶಾಲೆಯಲ್ಲಿ ಕಾರ್ಯಾಗಾರ
ಮಂಗಳೂರು, ಫೆ.9: ನಗರದ ಸಂತ ಅಲೋಶಿಯಸ್ ಕಾಲೇಜ್‌ನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಮಂಗಳವಾರ ಮರಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಪರೀಕ್ಷಾ ತಯಾರಿ’ ಹಾಗೂ ‘ಪೋಷಕಾಂಶಗಳ ಮಹತ್ವ’ ಎಂಬ ವಿಭಿನ್ನ ವಿಷಯಗಳ ಕುರಿತು ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಸಂತ ಅಲೋಶಿಯಸ್ ಕಾಲೇಜಿನ ಸಾಮಾಜಿಕ ಸಲಹಾ ಕೇಂದ್ರದ ಸಂಯೋಜಕರಾದ ಯೋಗೇಶ್.ಎಸ್ ಹಾಗೂ ಕ್ಯಾರಲ್ ಸೀಮಾ ಕ್ಯಾಸ್ತಲಿನೊ ಭಾಗವಹಿಸಿದ್ದರು. ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸುಲಭವಾಗಿ ತಯಾರಾಗುವ ಹಾಗೂ ವಿವಿಧ ಪೋಷಕಾಂಶಗಳ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭ ಮುಖ್ಯ ಶಿಕ್ಷಕಿ ಮಾಲತಿ, ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ರೇಚಲ್ ಡಿಸೋಜಾ, ಶ್ರುತಿ ಅಶೋಕ್, ಶ್ರೇಯಾ ಮತ್ತಿತರರು ಉಪಸ್ಥಿತರಿದ್ದರು.
Next Story





