ಅಕ್ರಮ ಜಾನುವಾರು ಸಾಗಾಟ: ಇಬ್ಬರ ಸೆರೆ
ಬ್ರಹ್ಮಾವರ, ಫೆ.9: ಗೂಡ್ಸ್ ಟೆಂಪೊದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬ್ರಹ್ಮಾವರ ಪೊಲೀಸರು ಚೇರ್ಕಾಡಿ ಗ್ರಾಮದ ಪರುಬೆಟ್ಟು ಎಂಬಲ್ಲಿ ಮಂಗಳವಾರ ಬೆಳಗ್ಗಿನ ಜಾವ ಬಂಧಿಸಿದ್ದಾರೆ.
ಬಂಧಿತರನ್ನು ಟೆಂಪೋ ಚಾಲಕ ಕೋಟತಟ್ಟು ಪಡುಕೆರೆಯ ಲಿಂಗರಾಜು (47) ಹಾಗೂ ಚೇರ್ಕಾಡಿ ಗ್ರಾಮದ ಪರುಬೆಟ್ಟುವಿನ ನಾರಾಯಣ ನಾಯ್ಕ (67) ಎಂದು ಗುರುತಿಸಲಾಗಿದೆ. ಇವರಿಂದ ಶಿವಮೊಗ್ಗಕ್ಕೆ ಸಾಗಿಸುತ್ತಿದ್ದ 73,200ರೂ. ವೌಲ್ಯದ ಐದು ಜಾನುವಾರು ಹಾಗೂ 4ಲಕ್ಷ ರೂ. ವೌಲ್ಯದ ಟೆಂಪೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





