ಬಂಟ್ವಾಳ ತಾಲೂಕಿಗೆ ಚುನಾವಣಾ ವೀಕ್ಷಕ ಭೇಟಿ

ಬಂಟ್ವಾಳ, ಫೆ.9: ಜಿಪಂ ಹಾಗೂ ತಾಪಂ ಚುನಾ ವಣೆಗೆ ಸಂಬಂಧಿಸಿ ದ.ಕ. ಜಿಲ್ಲೆಗೆ ಚುನಾವಣಾ ವೀಕ್ಷಕ ರಾಗಿ ನೇಮಕವಾಗಿರುವ ಬೆಂಗಳೂರು ಕಿಯೋನಿಕ್ಸ್ (ತಾಂತ್ರಿಕ) ನಿರ್ದೇಶಕ ಬಸವರಾಜೇಂದ್ರ ಎಚ್. ಮಂಗಳವಾರ ಬಂಟ್ವಾಳ ತಾಲೂಕಿಗೆಆಗಮಿಸಿದರು.
ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ಕೇಂದ್ರವಾಗಿರುವ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಗೆ ಮತ್ತು ತಾಲೂಕಿನ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಪಂ ಚುಣಾವಣಾಧಿಕಾರಿ ಡಾ. ಅಶೋಕ್ ಡಿ.ಆರ್. ಸಹಾಯಕ ಕಮಿಷನರ್ ಮಂಗಳೂರು, ತಹಶೀಲ್ದಾರ್ ಪುರಂದರ ಹೆಗಡೆ, ಚುನಾವಣಾ ಶಿರಸ್ತೇದಾರರಾದ ಪರಮೇಶ್ವರ್ ನಾಯ್ಕಾ, ಕಂದಾಯ ನೀರಿಕ್ಷಕರಾದ ನಾರಾಯಣ ಪೂಜಾರಿ, ಆಸಿಫ್ ಇಕ್ಬಾಲ್, ದಿವಾಕರ ಮುಗುಳ್ಯ ಮತ್ತು ಗ್ರಾಮ ಕರಣಿಕರಾದ ಬಸವರಾಜ್ ಸನಾದಿ, ಜನಾರ್ದನ, ವಿನೋದ್, ತೌಫೀಕ್, ಸಿಬ್ಬಂದಿ ಸದಾಶಿವ ಕೈಕಂಬ, ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು.
Next Story





