ಕರಾಟೆ: ಅಲ್-ಇಹ್ಸಾನ್ ಸ್ಕೂಲ್ ಸಾಧನೆ

ಉಡುಪಿ, ಫೆ.9: ಫೆಡರೇಶನ್ ಆಫ್ ಶೊಟೋಕಾನ್ ಕರಾಟೆ ಅಸೋಸಿಯೇಶನ್ ವತಿಯಿಂದ ಕಾರವಾರದಲ್ಲಿ ಇತ್ತೀಚೆಗೆ ನಡೆದ ಎರಡನೆ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮೂಳೂರು ಅಲ್-ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆಯ ನೌಫಲ್, ರಮೀಝ್ ಪ್ರಥಮ, ಸಾಹಿಲ್, ಮಾಹೀಝ್ ದ್ವಿತೀಯ, ಅಲ್ ಅಫಾನ್, ಅಬ್ದುಲ್ ಬಾಸಿತ್ ತೃತೀಯ ಸ್ಥಾನ ಪಡೆದಿದ್ದಾರೆ.ಪದಕ ವಿಜೇತ ವಿದ್ಯಾರ್ಥಿಗಳೊಂದಿಗೆ ಶಾಲಾ ಸಹಸಂಚಾಲಕ ಮುಹಮ್ಮದ್ ಅಲಿ ಅಡ್ವೊಕೇಟ್ ಕಾಪು, ಪ್ರಾಂಶುಪಾಲ ಹಬೀಬುರ್ರಹ್ಮಾನ್ ಕೆ.ಎಸ್., ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಯಪ್ರಸನ್ನ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪ್ರಮೀಳಾ, ಕರಾಟೆ ಶಿಕ್ಷಕ ಮುಹಮ್ಮದ್ ನದೀಮ್, ದೈಹಿಕ ಶಿಕ್ಷಣ ಶಿಕ್ಷಕ ಬಶೀರ್ ಎಂ. ಮೂರುಗೋಳಿ ಇದ್ದರು.
Next Story





