ಶಾಲಾ ಪರಿಸರದಲ್ಲಿ ಮದ್ಯ ಮಾರಾಟ: ಓರ್ವನ ಸೆರೆ
ಮಂಜೇಶ್ವರ, ಫೆ.9: ಶಾಲಾ ಪರಿಸರದಲ್ಲಿ ವ್ಯಾಪಕ ಮದ್ಯ ಮಾರಾಟ ನಡೆಯುತ್ತಿರುವುದಾಗಿ ಲಭಿಸಿದ ದೂರಿನ ಮೇರೆಗೆ ಅಬಕಾರಿ ಪೊಲೀಸರು ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಾಟದ ಮೂಲ ಸೂತ್ರದಾರನಾದ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಪ್ಪಳ ಪಚ್ಲಂಪಾರೆಯ ಚಂದ್ರಹಾಸ(48)ಬಂಧಿತ ಆರೋಪಿ.ಈತನಿಂದ 180ಮಿ.ಯ 48 ಮದ್ಯ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಉಪ್ಪಳ ಶಾಲಾ ಪರಿಸರದಲ್ಲಿ ಪ್ಲಾಸ್ಟಿಕ್ ಬಕೆಟ್‌ನಲ್ಲಿ ತುಂಬಿಸಿ ಮದ್ಯ ಮಾರಾಟ ಮಾಡುತ್ತಿರುವ ಮಧ್ಯೆ ಆರೋಪಿಯನ್ನು ಚಾಣಾಕ್ಷತನದಿಂದ ಸೆರೆಹಿಡಿಯಲಾಗಿದೆ.ಶಾಲಾ ಪರಿಸರದಲ್ಲಿ ವ್ಯಾಪಕ ಮದ್ಯ ಮಾರಾಟ ನಡೆಸಲಾಗುತ್ತಿದೆಯೆಂಬ ಊರವರ ನಿರಂತರ ದೂರಿನ ಪರಿಣಾಮ ಈ ಕಾರ್ಯಾಚರಣೆ ನಡೆದಿದೆ.
Next Story





