ತುಂಬೆ: ನೇತ್ರಾವತಿ ನದಿ ನೀರಿನಲ್ಲಿ ಮುಳುಗಿ ಮೃತ್ಯು
ಬಂಟ್ವಾಳ, ಫೆ. 9: ತಾಲೂಕಿನ ತುಂಬೆ ನೇತ್ರಾವತಿ ನದಿಯಲ್ಲಿ ಮರುವಾಯಿ ಹೆಕ್ಕಲು ಹೋಗಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ನಾವೂರು ಗ್ರಾಮದ ಫರ್ಲಾ ನಿವಾಸಿ ಜೋಸೆಫ್(48) ಮೃತರು. ಇವರು ಮಂಗಳವಾರ ಮಧ್ಯಾಹ್ನ ನೇತ್ರಾವತಿ ನೀರಿನಲ್ಲಿ ಮುಳುಗಿ ಮರಳಿನಲ್ಲಿ ಸಿಗುವ ಮರುವಾಯಿ ಮೀನು ಹೆಕ್ಕುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
Next Story





