‘ಮೈಟ್’ ವಿದ್ಯಾರ್ಥಿಗಳು ಆವಿಷ್ಕರಿಸಿದ ವಾಹನಕ್ಕೆ ‘ವರ್ಷದ ಅತ್ಯಂತ ಜನಪ್ರಿಯ ಕಾರು’ ಪ್ರಶಸ್ತಿ

ಮಂಗಳೂರು, ಫೆ. 10: ಮೂಡುಬಿದಿರೆ ಸಮೀಪದ ಮಿಜಾರಿನ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಎಂಜಿನಿಯರಿಂಗ್ (ಮೈಟ್)ನ ವಿದ್ಯಾರ್ಥಿಗಳು ಆವಿಷ್ಕರಿಸಿದ ಸ್ಪೋರ್ಟ್ಸ್ ವಾಹನವು 2016ರ ಜನವರಿ ತಿಂಗಳಲ್ಲಿ ಜೆಕೆ ಟೈರ್ಸ್ ಮೋಟಾರ್ ಸ್ಪೋರ್ಟ್ ವತಿಯಿಂದ ನೋಯ್ಡೋದ ಬುದ್ಧ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆದ ಬಾಜಾ ಸ್ಟೂಡೆಂಟ್ ಇಂಡಿಯಾ ಸ್ಪರ್ಧೆಯಲ್ಲಿ ‘ಮೋಸ್ಟ್ ಪಾಪ್ಯುಲರ್ ಕಾರ್’ ಪ್ರಶಸ್ತಿಗೆ ಪಾತ್ರವಾಗಿದೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ಮತ್ತು ತೃತೀಯ ವರ್ಷದ ಒಟ್ಟು 30 ಮಂದಿ ವಿದ್ಯಾರ್ಥಿಗಳು ‘ಟೀಂ ಮೈಟ್ ರೇಸಿಂಗ್’ (ಟಿಎಂಆರ್) ಎಂಬ ತಂಡವನ್ನು ಕಟ್ಟಿ ಈ ವಾಹನವನ್ನು ಆವಿಷ್ಕರಿಸಿದ್ದಾರೆ.
ತಂಡವು ೆ.16ರಂದು ಇಂದೋರ್‌ನಲ್ಲಿ ಮಹೀಂದ್ರಾ ಕಂಪೆನಿ ಏರ್ಪಡಿಸಿರುವ ಸೊಸೈಟಿ ಆ್ ಆಟೋಮೋಟಿವ್ ಎಂಜಿನಿಯರ್ಸ್ (ಎಸ್‌ಎಇ)- ಬಾಜಾ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಈ ಸ್ಪರ್ಧೆಯಲ್ಲಿ 154 ಕಾಲೇಜು ತಂಡಗಳು ಪಾಲ್ಗೊಳ್ಳುತ್ತಿವೆ ಎಂದು ಮೈಟ್‌ನ ಆಡಳಿತ ಮಂಡಳಿ, ರಾಜಲಕ್ಷ್ಮಿ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ರಾಜೇಶ್ ಚೌಟ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ನಿರ್ದೇಶಕರಾದ ಸವಿತಾ ಚೌಟ, ಮೈಟ್‌ನ ಪ್ರಾಂಶುಪಾಲ ಡಾ.ಈಶ್ವರ ಎಲ್. ಪ್ರಸಾದ್ ಉಪಸ್ಥಿತರಿದ್ದರು.
ಈ ವಾಹನ ಆವಿಷ್ಕಾರದ ಬಗ್ಗೆ 2014ರಲ್ಲಿ ಅಶ್ವಿನ್ ಬಲರಾಂ ನೇತೃತ್ವದಲ್ಲಿ ‘ಟೀಮ್ ಮೈಟ್ ರೇಸಿಂಗ್’ ತಂಡ ರಚನೆಯೊಂದಿಗೆ ಪೂರ್ವ ಸಿದ್ಧತೆ ಆರಂಭಗೊಂಡಿತ್ತು. ಯೋಜನೆಯನ್ನು ಕಾರ್ಯ ಗತಗೊಳಿಸಲು ಅನುಕೂಲವಾಗುವಂತೆ ತಂಡವನ್ನು ಎರಡು ಉಪ ವಿಭಾಗಗಳನ್ನಾಗಿ ವಿಂಗಡಿಸಲಾಗಿತ್ತು. 2015 ಜನವರಿಯಲ್ಲಿ ಕಾರ್ಯಕ್ಕಿಳಿದ ತಂಡವು ವಿವಿಧ ಕೈಗಾರಿಕಾ ಘಟಕಗಳು ಮತ್ತು ಕಾಲೇಜು ಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. 5 ತಿಂಗಳೊಳಗೆ ವಾಹನ ವಿನ್ಯಾಸ ವನ್ನು ತಯಾರಿಸಲಾಯಿತು. ಚಂಡೀಗಡದಲ್ಲಿರುವ ತೀರ್ಪುಗಾರರ ಮಂಡಳಿಗೆ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿ ಅರ್ಹತಾ ಸುತ್ತಿನಲ್ಲಿ ಪ್ರವೇಶ ಪಡೆದು 2015 ಮಾರ್ಚ್‌ನಲ್ಲಿ ವಾಹನ ನಿರ್ಮಾಣದಲ್ಲಿ ತೊಡಗಿಸಿಕೊಂಡಿತು.
2015 ನವೆಂಬರ್‌ನಲ್ಲಿ ‘ಆಲ್ ಟೆರೈನ್ ವೆಹಿಕಲ್’ (ಎಟಿವಿ) ನಿರ್ಮಾಣಗೊಂಡಿತು. ಬಳಿಕ ಅದರಲ್ಲಿಯೇ ಪರಿಷ್ಕ ರಣೆ ಮಾಡಿ ಮತ್ತಷ್ಟು ಸುಧಾರಣೆಗಳನ್ನು ತಂದು ನೋಯ್ಡಿದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಲಾಯಿತು ಎಂದು ವಾಹನದ ಚಾಲಕ ರ್ಅಾನ್ ಮತ್ತು ಡಿಸೈನರ್ ಹರೀಶ್ ಶೆಣೈ ಮಾಹಿತಿ ನೀಡಿದರು. ಈ ಯೋಜನೆಗೆ ಒಟ್ಟು 7.5 ಲಕ್ಷ ರೂ. ಖರ್ಚಾಗಿದ್ದು, ಅದನ್ನು ಕಾಲೇಜಿನ ಆಡ ಳಿತ ಮಂಡಳಿ ಒದಗಿಸಿದೆ. ಮೆಕ್ಯಾನಿಕಲ್ ಇಂಜಿನಿ ಯರಿಂಗ್ ವಿಭಾಗ ಮತ್ತು ಪಾಂಶುಪಾಲರು ತಾಂತ್ರಿಕ ಮತ್ತು ಇತರ ಸಹಾಯ ನೀಡಿ ಬೆಂಬಲಿಸಿ ದ್ದಾರೆ ಎಂದರು. ಪಠ್ಯ ವಿಷಯದ ಜೊತೆಗೆ ಕೈಗಾರಿಕೆಗಳ ಆವಶ್ಯಕತೆಗಳ ವ್ಯಾಸಂಗಕ್ಕೆ ಅವಕಾಶ, ಸಂಶೋ ಧನೆಗೆ ಪ್ರೋತ್ಸಾಹಿಸಿ ಹೊಸ ಉತ್ಪನ್ನಗಳ ಆವಿಷ್ಕಾರಕ್ಕೆ ಸಹಾಯ,
ರಾಷ್ಟ್ರ ಮಟ್ಟದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿನಿಧಿಸಲು ಉತ್ತೇಜನವನ್ನು ಸಂಸ್ಥೆ ನೀಡುತ್ತಿದೆ ಎಂದು ಅಧ್ಯಕ್ಷ ರಾಜೇಶ್ ಚೌಟ ವಿವರಿಸಿದರು. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಈ ಸ್ಪರ್ಧೆಯಲ್ಲಿ ಒಟ್ಟು 44 ತಂಡಗಳು ಭಾಗವಹಿಸಿದ್ದವು. ಮೈಟ್ ತಂಡವು ವಾಹನದ ಡಿಸೈನ್‌ನಲ್ಲಿ 16ನೆ ಸ್ಥಾನ, ಬ್ಯುಸ್‌ನೆಸ್ ಮತ್ತು ಸೇಲ್ಸ್‌ನಲ್ಲಿ 19ನೆ ಸ್ಥಾನ, ವಾಹನದ ಆ್ಯಕ್ಸಿಲರೇಶನ್ ಸಾಮರ್ಥ್ಯದಲ್ಲಿ 7ನೆ ಸ್ಥಾನ, ಭಾರ ಎಳೆಯುವ ಸಾಮ ರ್ಥ್ಯದಲ್ಲಿ 11ನೆ ಸ್ಥಾನ, ಸಂಚಾರ ಸಾಮರ್ಥ್ಯದಲ್ಲಿ 8ನೆ ಸ್ಥಾನ ಗಳಿಸಿ ‘ಅತ್ಯಂತ ಜನಪ್ರಿಯ ಕಾರು’ ಪ್ರಶಸ್ತಿ ಗೆದ್ದುಕೊಂಡಿದೆ. ಈ ಎಲ್ಲಾ ಅಂಕ ಗಳನ್ನು ಕ್ರೋಡೀಕರಿಸಿ 44 ತಂಡಗಳಲ್ಲಿ 10ನೆ ಸ್ಥಾನಕ್ಕೆ ಪಾತ್ರ ವಾಗಿದೆ.
















