ಪ್ರೊ ಕಬಡ್ಡಿ ಲೀಗ್: ಬೆಂಗಾಲ್‌ಗೆ ಅಗ್ರ ಸ್ಥಾನ
ಕೋಲ್ಕತಾ, ಫೆ.10: ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪಿಂಕ್ ಪ್ಯಾಂಥರ್ಸ್ ತಂಡವನ್ನು ಭಾರೀ ಅಂತರದಿಂದ ಮಣಿಸಿದ ಆತಿಥೇಯ ಬೆಂಗಾಲ್ ವಾರಿಯರ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಲೀಗ್‌ನ 21ನೆ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ (34)ಪಿಂಕ್ ಪ್ಯಾಂಥರ್ಸ್ ತಂಡವನ್ನು(20) 14 ಅಂಕಗಳ ಅಂತರದಿಂದ ಹೀನಾಯವಾಗಿ ಸೋಲಿಸಿತು. 6 ಪಂದ್ಯಗಳಲ್ಲಿ 5ನೆ ಗೆಲುವು ದಾಖಲಿಸಿರುವ ಬೆಂಗಾಲ್ 26 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಇದಕ್ಕೆ ಮೊದಲು ನಡೆದ ಲೀಗ್‌ನ 20ನೆ ಪಂದ್ಯದಲ್ಲಿ ಯೂ ಮುಂಬಾ ತಂಡ(29) ಕೇವಲ ಒಂದು ಅಂಕಗಳ ಅಂತರದಿಂದ ಬೆಂಗಳೂರು ಬುಲ್ಸ್(28) ತಂಡವನ್ನು ರೋಚಕವಾಗಿ ಮಣಿಸಿತು. ಈ ಗೆಲುವಿನ ಮೂಲಕ 5ನೆ ಪಂದ್ಯದಲ್ಲಿ 3ನೆ ಜಯ ಸಾಧಿಸಿತು. 15 ಅಂಕ ಗಳಿಸಿ 4ನೆ ಸ್ಥಾನಕ್ಕೇರಿತು.
Next Story





