ಉರ್ದು ದಿನಾಚರಣೆ: ಮಕ್ಕಳಿಗೆ ಉರ್ದು ಶಿಕ್ಷಣ ನೀಡಿ: ರೋಷನ್ ಬೇಗ್

ಬೆಂಗಳೂರು, ಫೆ. 10: ಉರ್ದು ಭಾಷೆಯ ವ್ಯಾಪ್ತಿ ಹೆಚ್ಚಿಸಲು ಪೋಷಕರು ಮಕ್ಕಳಿಗೆ ಉರ್ದು ಶಿಕ್ಷಣ ನೀಡಬೇಕೆಂದು ಮೂಲ ಸೌಕರ್ಯ ಮತ್ತು ವಾರ್ತಾ ಸಚಿವ ರೋಷನ್ ಬೇಗ್ ಅಭಿಪ್ರಾಯಪಟ್ಟರು.
ಬುಧವಾರ ನಗರದ ಪುರುಭವನದಲ್ಲಿ ಯೌಮೇ ಉರ್ದು ಸಮಿತಿ, ಐಎಂಎ ಹಾಗೂ ಕರ್ನಾಟಕ ಉರ್ದು ಅಕಾಡೆಮಿ ಸಹಯೋಗದೊಂದಿಗೆ ಆಯೋಜಿಸಿದ್ದ, ‘ಉರ್ದು ದಿನಚಾರಣೆ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪುರಾತನ ಭಾಷೆಗಳಲ್ಲಿ ಉರ್ದು ಒಂದಾಗಿದ್ದು, ಇಂತಹ ಭಾಷೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಪೋಷಕರು ಮಕ್ಕಳಿಗೆ ಉರ್ದು ಶಿಕ್ಷಣ ನೀಡಬೇಕು. ಅಲ್ಲದೆ, ಉರ್ದು ಭಾಷೆಯಲ್ಲೂ ವಿಶ್ವದರ್ಜೆಯ ಸಾಧನೆ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ ಎಂದು ರೋಷನ್ ಬೇಗ್ ವಿವರಿಸಿದರು.ರ್ದು ಸಾಹಿತ್ಯ ಮತ್ತು ಭಾಷೆ ಅತ್ಯಂತ ಶ್ರೀಮಂತವಾಗಿದೆ ಎಂದ ಅವರು, ಆಂಗ್ಲ ಭಾಷೆಯ ಪರಿಣಾಮದಿಂದಾಗಿ ಪ್ರಾದೇಶಿಕ ಭಾಷೆಗಳ ವ್ಯಾಪ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ಎಲ್ಲರೂ ಒಗ್ಗೂಡಿ ಸ್ಥಳೀಯ ಭಾಷೆಯ ಚಟುವಟಿಕೆಗಳನ್ನು ಬೆಂಬಲಿ ಸಬೇಕೆಂದು ನುಡಿದರು.ರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷೆ ಬಲ್ಕೀಸ್ ಬಾನು ಮಾತನಾಡಿ, ಯಾವುದೇ ಭಾಷೆ ಇರಲಿ ಹೆಣ್ಣು ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಲು ಮುಂದಾಗಬೇಕು. ಅಲ್ಲದೆ, ಸರಕಾರಗಳು ಹೆಣ್ಣು ಮಕ್ಕಳ ಪ್ರಗತಿಗೆ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿವೆ ಎಂದರು.
ಸಮಾರಂಭದಲ್ಲಿ ಕರ್ನಾಟಕ ಉರ್ದು ಅಕಾಡಮಿ ಅಧ್ಯಕ್ಷೆ ಡಾ.ಫೌಝಿಯಾ ಚೌಧರಿ, ಯೌಮೇ ಉರ್ದು ಕಮಿಟಿಯ ಪ್ರಧಾನ ಸಂಚಾಲಕಿ ಡಾ.ಶಾಹಿಸ್ತಾ ಯೂಸುಫ್ ಸೇರಿ ಪ್ರಮುಖರು ಹಾಜರಿದ್ದರು. ಇದೇ ವೇಳೆ ಉರ್ದು ಭಾಷೆಯಲ್ಲಿ ಸಾಧನೆ ಮಾಡಿದ ಪ್ರಮುಖರಿಗೆ ಪ್ರಶಸ್ತಿ ಪ್ರದಾನಿಸಲಾಯಿತು.





