ಚುನಾವಣೆ ನಂತರ ಬಜೆಟ್ ಸಿದ್ಧತೆ: ಸಿಎಂ
ಬೆಂಗಳೂರು, ಫೆ.10: ಜಿಲ್ಲಾ-ಪಂಚಾಯತ್ ಚುನಾವಣೆಯ ನಂತರ ಬಜೆಟ್ ಮಂಡಿಸುವ ಕಾರ್ಯವನ್ನು ಚುರುಕುಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಿಂದ ರಾಯಚೂರು ಜಿಲ್ಲೆಯ ದೇವದುರ್ಗಕ್ಕೆ ತೆರಳುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ಪೂರ್ವ ಸಿದ್ಧತೆಯಲ್ಲಿ ತೊಡಗಿಲ್ಲ. ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ಜಿಲ್ಲಾ-ಪಂಚಾಯತ್ ಮುಗಿದ ನಂತರ ಬಜೆಟ್ ಸಿದ್ಧತೆಯಲ್ಲಿ ತೊಡಗಲಾಗುವುದು ಎಂದು ತಿಳಿಸಿದರು.
ಬಜೆಟ್ ರೂಪಿಸುವಾಗ ರಾಜ್ಯದ ವಿವಿಧ ಉದ್ಯಮಿಗಳೊಂದಿಗೆ, ರೈತರೊಂದಿಗೆ ಚರ್ಚಿಸಲಾಗುವುದು. ಇವರ ಸಲಹೆ ಸೂಚನೆಗಳನ್ನು ಪಡೆದು ಜನಪರವಾದ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತೆರಿಗೆ ಸಂಗ್ರಹ ತೃಪ್ತಿಕರ: ರಾಜ್ಯದಲ್ಲಿ ವಿವಿಧ ಮೂಲಗಳಿಂದ ತೆರಿಗೆ ಸಂಗ್ರಹ ಕಾರ್ಯವು ತೃಪ್ತಿಕರವಾಗಿದೆ. ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ. ತೆರಿಗೆ ವಸೂಲಾತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.ಣಿ ಕಂಪೆನಿಗಳಿಂದ ಅರಣ್ಯ ಅಭಿವೃದ್ಧಿ ತೆರಿಗೆ ಸಂಗ್ರಹದ ಬಗ್ಗೆ ರಾಜ್ಯ ಹೈ ಕೋರ್ಟ್ ಅದೇಶ ನೀಡಿದ್ದು, ಅದನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇದರ ಸಾಧಕ-ಬಾಧಕಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.





