ಮೂರು ಲಕ್ಷ ರೂ.ವೇತನಕ್ಕೆ ತೆಲಂಗಾಣ ಶಾಸಕರ ಬೇಡಿಕೆ
ಹೊಸದಿಲ್ಲಿ, ಫೆ.10: ತೆಲಂಗಾಣದ ಶಾಸಕರು ತಮಗೆ ಈಗ ಇರುವ ತಿಂಗಳ ವೇತನವನ್ನು 95 ಸಾವಿರ ರೂ.ಗಳಿಂದ 3 ಲಕ್ಷ ರೂ.ಗೆ ಏರಿಸುವಂತೆ ಆಗ್ರಹಿಸಿದ್ದಾರೆ.ಆನೇಕ ಮಂದಿ ಎಂಎಲ್‌ಎ ಮತ್ತು ಎಂಎಲ್‌ಸಿಗಳು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಮಂಗಳವಾರ ನಡೆದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಈ ವಿಚಾರ ಪ್ರಸ್ತಾಪಗೊಂಡಿದೆ. ತೆಲಂಗಾಣದ ಶಾಸಕರು ಪ್ರಸ್ತುತ 95 ಸಾವಿರ ರೂ. ಮಾಸಿಕ ವೇತನ ಪಡೆಯುತ್ತಿದ್ದಾರೆ. ಕ್ಯಾಬಿನೆಟ್ ರ್ಯಾಂಕ್ ಹೊಂದಿರುವವರಿಗೆ ಇದರ ದುಪ್ಪಟ್ಟು ವೇತನ ದೊರೆಯುತ್ತಿವೆ. ಮನೆ ಖರ್ಚು, ಸಿಬ್ಬಂದಿಗಳಿಗೆ ವೇತನ, ಸಹಾಯಧನ ನೀಡಿಕೆ, ಬೇರೆ ಬೇರೆ ವ್ಯಕ್ತಿಗಳ ಭೇಟಿ, ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಈಗ ದೊರೆಯುವ ವೇತನ ಸಾಕಾಗುತ್ತಿಲ್ಲ. ಈ ಕಾರಣದಿಂದ ತಿಂಗಳ ವೇತನವನ್ನು 3 ಲಕ್ಷ ರೂಗಳಿಗೆ ಏರಿಕೆ ಮಾಡಬೇಕು. ದಿಲ್ಲಿಯಲ್ಲಿ ಶಾಸಕರ ವೇತನವನ್ನು 4 ಲಕ್ಷ ರೂ.ಗಳಿಗೆ ಏರಿಸಲು ಸಾಧ್ಯವಿದ್ದರೆ ನಮಗೆ ಇಲ್ಲಿ ಯಾಕೆ ಸಾಧ್ಯವಿಲ್ಲ ಎಂದು ತೆಲಂಗಾಣದ ಶಾಸಕರು ಮುಖ್ಯಮಂತ್ರಿ ಮಂದೆ ಪ್ರಶ್ನೆ ಎತ್ತಿದ್ದಾರೆ.





