ಕಿನ್ನಿಗೋಳಿ ಪರಿಸರದ 17 ಗ್ರಾಮಗಳಿಗೆ ನೀರು: ಸಚಿವ ಅಭಯ ಚಂದ್ರ ಜೈನ್

ಕಿನ್ನಿಗೋಳಿ, ಫೆ.10: ಕಿನ್ನಿಗೋಳಿ ಪರಿಸರದ 17 ಗ್ರಾಮಗಳಿಗೆ ನೀರುಣಿಸುವ 18 ಲಕ್ಷ ರೂ. ವೆಚ್ಚದ ನಿರಾವರಿ ಕಾಮಗಾರಿ ಸಂಪೂರ್ಣ ಗೊಂಡು ಈಗಾಗಲೇ ನೀರು ನೀಡಲಾಗುತ್ತಿದೆ. ಚುನಾವಣೆಯ ಬಳಿಕ ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು
ಎಂದು ಮುಲ್ಕಿ ಮೂಡಬಿದಿರೆ ಶಾಸಕ ಹಾಗೂ ರಾಜ್ಯ ಕ್ರೀಡೆ , ಯುವಜನ ಸೇವೆ ಮೀನುಗಾರಿಕಾ ಸಚಿವ ಅಭಯ ಚಂದ್ರ ಜೈನ್ ತಿಳಿಸಿದ್ದಾರೆ.
ಅವರು ಕಿನ್ನಿಗೋಳಿ ರಾಜಾಂಗಣದಲ್ಲಿ ಆಯೋಜಿಸಲಾಗಿದ್ದ ಕಾಂಗ್ರಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.
ಕಾಂಗ್ರಸ್ ನ ಒಳಗಿರುವ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಲ್ಕಿ - ಮೂಡಬಿದಿರೆ ವ್ಯಾಪ್ತಿಯ ಎಲ್ಲಾ ಜಿ.ಪಂ.ಹಾಗೂ ತಾ.ಪಂ ಅಭ್ಯರ್ಥಿಗಳನ್ನು ಬಹುಮತಗಳಿಂದ ಗೆಲ್ಲಿಸಬಬೇಕೆಂದರು.
ಇದೇ ವೇಳೆ ಜೆಡಿಎಸ್ ನ ಹಿರಿಯ ನಾಯಕಿ ಸುಗಂಧಿ ಕೊಂಡಾಣ ರವರನ್ನು ಸಚಿವರು ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಳಿಸಿದರು.
ಈ ಸಂದರ್ಭ ಕಾಂಗ್ರೆಸ್ ಹಿರಿಯ ಮುಖಂಡರಾದ ಅಬೂಬಕರ್ ಕಾರ್ನಾಡ್, ಗುಣಪಾಲ ಶೆಟ್ಟಿ, ಉಮಾವತಿ, ಜಿಲ್ಲಾ ಪಂಚಾಯತ್ ಅಭ್ಯರ್ಥಿ ಪ್ರಮೋದ್ ಕುಮಾರ್, ತಾಲೂಕು ಪಂ. ಅಭ್ಯರ್ಥಿ ಜೊಸ್ಸಿ ಪಿಂಟೊ, ವಸಂತ್ ಬೆರ್ನಾರ್ಡ್ , ಬಿ.ಎಂ.ಆಸೀಫ್, ಫಿಲೊಮಿನಾ ಸಿಕ್ವೇರಾ, ಶಾಲೆಟ್ ಪಿಂಟೋ, ಮತ್ತಿತರರು ಉಪಸ್ಥಿತರಿದ್ದರು.





