ಗಲ್ಫ್ ನಲ್ಲಿರುವ ಗಂಡನನ್ನು ಸಂತೋಷ ಪಡಿಸಲು ನಗ್ನ ವೀಡಿಯೊ ಕಳಿಸಿದ ಯುವತಿ ಈಗ ಬೀದಿಗೆ!

ಕೋಟ್ಟಯಂ: ಗಲ್ಫ್‌ನಲ್ಲಿರುವ ಪತಿ ನೋಡಿ ಆಸ್ವಾದಿಸಲಿಕ್ಕಾಗಿ ಆಯುವತಿ ನಗ್ನ ವೀಡಿಯೊ ಸೆಲ್ಫಿ ತೆಗೆದಿದ್ದಾಳೆ. ಆದರೆ ಅದು ಈಗ ಅವಳ ಜೀವನಕ್ಕೆ ಕೊಳ್ಳಿಯಿಟ್ಟಿದೆ. ಯುವತಿ ತನ್ನ ಮೊಬೈಲ್ ರಿಪೇರಿಗೆ ಕೊಟ್ಟಾಗ ಅದರಲ್ಲಿದ್ದ ಅವಳ ನಗ್ನ ವೀಡಿಯೊ ಬಹಿರಂಗವಾಯಿತು. ಆನಂತರ ಅವಳು ಗಂಡನ ಸ್ನೇಹಿತನಿಂದಲೇ ಲೈಂಗಿಕ ದುರ್ಬಳಕೆಗೊಳಗಾಗಿದ್ದಳು. ಇದು ತಿಳಿದಾಗ ಮನೆಯಿಂದ ಹೊರದಬ್ಬಲ್ಪಟ್ಟಿದ್ದಾಳೆ! ಈಘಟನೆ ಈರಾಟ್ಟಪೇಟ್ಟೆ ತೀಕ್ಕೊ ಎಂಬಲ್ಲಿ ನಡೆದಿದೆ.
ಮೊಬೈಲ್‌ನ್ನು ರಿಪೇರಿಗೆ ತನ್ನ ಪತಿಯ ಗೆಳೆಯನಿಗೆ ಆಕೆ ಕೊಟ್ಟಿದ್ದಳು. ಅದರಲ್ಲಿ ನಗ್ನ ವೀಡಿಯೊ ಸಿಕ್ಕಾಗ ಆತ ರಾಕ್ಷಕನಾಗಿ ಬದಲಾಗಿದ್ದ. ಯುವತಿಯನ್ನು ಬ್ಲಾಕ್‌ಮೈಲ್ ಮಾಡಿ ಅಸಹಾಯಕತೆಯನ್ನು ದುರುಪಯೋಗಿಸಿ ಅವಳೊಂದಿಗೆ ಶರೀರ ಸಂಪರ್ಕ ಬೆಳೆಸಿದ. ಮಾತ್ರವಲ್ಲ ಅವಳನ್ನು ತನ್ನ ಗೆಳೆಯರಿಗೂ ಒಪ್ಪಿಸಿದ. ಯುವತಿ ಬೆದರಿ ಇದಕ್ಕೆಲ್ಲ ಸಹಕರಿಸಬೇಕಾಗಿ ಬಂದಿತ್ತು. ಕೊನೆಗೆ ಈ ರಹಸ್ಯ ಗಂಡನ ಮನೆಯವರಿಗೆ ತಿಳಿದಾಗ ಯುವತಿಯನ್ನು ಮನೆಯಿಂದ ಹೊರದಬ್ಬಿದರು. ಉಳಿದುಕೊಳ್ಳಲು ಸ್ಥಳವಿಲ್ಲದೆ ಅಲೆದಾಡಿದ ಯುವತಿ ಚಂಙನಶೇರಿಯ ಓರ್ವ ಉಸ್ತಾದರ ಬಳಿಗೆ ಬಂದಿದ್ದಳು. ಅವರು ಪೊಲೀಸರಿಗೆ ದೂರು ನೀಡಲು ಸಲಹೆ ಇತ್ತರು. ಆದ್ದರಿಂದ ಯುವತಿಯ ಮೇಲೆ ಅತ್ಯಾಚಾರ ನಡೆಸಿದವರು ಸಿಕ್ಕಿಬಿದಿದ್ದಾರೆ. ಫಾಝಿಲ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಮಸ್ಕತ್‌ನಲ್ಲಿ ಯುವತಿಯ ಗಂಡ ಕೆಲಸ ಮಾಡುತ್ತಿದ್ದಾನೆ. ಅವರಿಬ್ಬರೂ ಪ್ರೇಮವಿವಾಹವಾಗಿದ್ದರು. ದಂಪತಿಗಳಿಗೆ ಮೂರು ಮಕ್ಕಳು ಇವೆ. ಫಾಝಿಲ್ ಎಂಬಾತನಿಗೆ ಮೊಬೈಲ್ ಫೋನ್ ರಿಪೇರಿಗೆ ಕೊಟ್ಟಾಗ ಅದರಲ್ಲಿದ್ದ ನಗ್ನ ವೀಡಿಯೊ ತೆಗೆದಿರಿಸಿದ್ದೇನೆ ಎಂದು ಯುವತಿಯನ್ನು ಬೆದರಿಸಿ ಆತ ದೈಹಿಕ ಸಂಪರ್ಕಬೆಳೆಸಿದ್ದ. ಇದು ಆಗಾಗ ಮುಂದುವರಿಯಿತು. ಅಲಿಗೆ ಸುಮ್ಮನಾಗದೆ ಆತ ಯುವತಿಯನ್ನು ತನ್ನ ಗೆಳೆಯರಿಗೂ ಹಂಚಿದ್ದ. ಅಂತಿಮವಾಗಿ ಇದು ಗಂಡನ ಮನೆಯವರಿಗೆ ಗೊತ್ತಾದಾಗ ಅವಳು ಬೀದಿ ಪಾಲಾಗಬೇಕಾಗಿ ಬಂತು. ಇದೀಗ ಪೊಲೀಸರು ಕೇಸು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.





