ನಿಟ್ಟೆ : ಮೊಬೈಲ್ ಅಪ್ಲಿಕೇಶನ್ ಡೆವಲಪ್‌ಮೆಂಟ್ ಕಾರ್ಯಾಗಾರ
ನಿಟ್ಟೆ : ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ. ಸ್ಟೂಡೆಂಡ್ ಚಾಪ್ಟರ್ ವಿಭಾಗದಿಂದ ಎರಡು ದಿನಗಳ ಮೊಬೈಲ್ ಅಪ್ಲಿಕೇಶನ್ ಡೆವಲಪ್‌ಮೆಂಟ್ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್‌ಫಾರ್ಮೇಶನ್ ಸೈನ್ಸ್ ವಿಭಾಗದ ಪ್ರೊ.ಅಶ್ವಿನಿ ಬಿ. ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕ ಪ್ರೊ.ವೇಣುಗೋಪಾಲ್ ಪಿ.ಎಸ್., ಪ್ರೊ.ರೋಶನ್ ಫೆರ್ನಾಂಡೀಸ್ ಭಾಗವಹಿಸಿದ್ದರು.
ವಿವಿಧ ತಾಂತ್ರಿಕ ಅಂಶಗಳ ಬಗ್ಗೆ ನಡೆದ ಈ ಕಾರ್ಯಾಗಾರದಲ್ಲಿ ವಿವಿಧ ತಾಂತ್ರಿಕ ವಿದ್ಯಾಲಯಗಳ ಉಪನ್ಯಾಸಕರುಗಳು ಹಾಗೂ ಪಿ.ಜಿ. ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಸಂಯೋಜಕಿ ಪ್ರೊ.ಮಾನಸಾ ಉಪಸ್ಥಿತರಿದ್ದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ಹಾಗೂ ಉಪಪ್ರಾಂಶುಪಾಲ ಡಾ.ಐ.ಆರ್.ಮಿತ್ತಂತಾಯ ಮತ್ತು ಟಿಇಕ್ಯುಐಪಿ ನಿಟ್ಟೆ ಘಟಕದ ಮಾರ್ಗದರ್ಶನದಲ್ಲಿ ನಡೆಯಿತು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಬಾಲಸುಬ್ರಹ್ಮಣಿ ಆರ್.ಸ್ವಾಗತಿಸಿದರು.





