ಕಿನ್ನಿಗೋಳಿ, ಫೆ.11: ಇಲ್ಲಿನ ಜಿಲ್ಲಾ ಪಂಚಾಯತ್ ಬಿ.ಜೆ.ಪಿ. ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಚಾಲನೆ

ಕಿನ್ನಿಗೋಳಿ, ಫೆ.11: ಇಲ್ಲಿನ ಜಿಲ್ಲಾ ಪಂಚಾಯತ್ ಬಿ.ಜೆ.ಪಿ. ಅಭ್ಯರ್ಥಿ ವಿನೋದ್ ಕುಮಾರ್ ಬೊಳ್ಳೂರು ಹಾಗೂ ತಾಲೂಕು ಪಂಚಾಯತ್ ಬಿ.ಜೆ.ಪಿ ಅಭ್ಯರ್ಥಿ ದಿವಾಕರ ಕರ್ಕೇರಾ ಪರ ಪ್ರಚಾರಕ್ಕೆ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ಬಿಜೆಪಿಯ ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು ಕರಪತ್ರ ಹಸ್ತಾಂತರಿಸುದರೊಂದಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಚುಣಾವಣೆಗಾಗಿ ಪಕ್ಷ ಸಂಘಟಿತವಾಗಿ ಯಾವುದೇ ಭಿನ್ನಮತ ಇಲ್ಲದೆ ಕಾರ್ಯಕ್ರಮ ಕೈಗೊಂಡಿದೆ. ಹಿಂದಿನ ಚುಣಾವಣೆಗಳಿಗಿಂತಲೂ ಹೆಚ್ಚು ಸ್ಥಾನ ಪಡೆಯುವ ವಿಶ್ವಾಸ ಹೊಂದಿದ್ದೇವೆ. ಕಾರ್ಯಕರ್ತರು ಯಾವುದೇ ಅಪಪ್ರಚಾರಕ್ಕೆ ಕಿವಿ ಕೊಡ ಬಾರದು ಕೇಂದ್ರ ಸರ್ಕಾರ ಯೋಜನೆಗಳು ಹಾಗೂ ಪಕ್ಷದ ಜನಪರ ಹಿತಾಸಕ್ತಿಗಳನ್ನು ಗ್ರಾಮೀಣ ತಳವರ್ಗದ ಜನರಿಗೆ ತಲಪಿಸುವ ಕಾರ್ಯ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತಿ ಅಭ್ಯರ್ಥಿ ವಿನೋದ್ ಕುಮಾರ್ ಬೊಳ್ಳೂರು ಮಾತನಾಡಿ, ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗುವುದು ಎಂದರು. ಈ ಸಂದರ್ಭ ಕಿನ್ನಿಗೋಳಿ ತಾಪಂ.ಅಭ್ಯರ್ಥಿ ದಿವಾಕರ ಕರ್ಕೇರಾ, ಕಿಲ್ಪಾಡಿ ತಾ.ಪಂ ಅಭ್ಯರ್ಥಿ ಶರತ್ ಕುಬೆವೂರು, ಬಳ್ಕುಂಜೆ ತಾಪಂ.ಅಭ್ಯರ್ಥಿ ರಶ್ಮಿ ಆಚಾರ್ಯ, ಬಳ್ಕುಂಜೆ ಪಂಚಾಯತ್ ಅಧ್ಯಕ್ಷ ದಿನೇಶ್ ಪುತ್ರನ್, ಕಿನ್ನಿಗೋಳಿ ಪಂಚಾಯತ್ ಸದಸ್ಯರಾದ ರವೀಂದ್ರ ದೇವಾಡಿಗ, ಶಾಲಿನಿ, ಹೇಮಲತಾ, ಜಿಲ್ಲಾ ಸಮಿತಿಯ ಕೆ.ಭುವನಾಭಿರಾಮ ಉಡುಪ, ಪುನರೂರು ಬೂತ್ ಅಧ್ಯಕ್ಷ ಅಜಿತ್ ಕೋಟ್ಯಾನ್, ಹಿರಿಯ ಕಾರ್ಯಕರ್ತ ವಿಠಲ ಶೆಟ್ಟಿ, ಮುಲ್ಕಿ ನಗರ ಪಂಚಾಯತ್ ಸದಸ್ಯ ಶೈಲೇಶ್, ವಿಠಲ ಕೆ.ಎಸ್.ರಾವ್ ನಗರ, ನವೀನ್ ರಾಜ್, ತುಕಾರಾಮ, ಹಿಮಕರ ಮತ್ತಿತರರು ಉಪಸ್ಥಿತರಿದ್ದರು.







