ಫೆಬ್ರವರಿ12: ‘ಯುನಿವೆಫ್’ ನಿಂದ ಉಳ್ಳಾಲದಲ್ಲಿ ಪ್ರವಾದಿ ಸಂದೇಶ
ಯುನಿವರ್ಸಲ್ ವೆಲ್‌ಫೇರ್ ಫೋರಂ–ಯುನಿವೆಫ್ ಕರ್ನಾಟಕ ಇದು2016ರ ಜನವರಿ15ರಿಂದ ಫೆಬ್ರವರಿ26ರ ವರೆಗೆ ಇಸ್ಲಾಮ್ ಒಂದು ಪರಿಹಾರ - ಪ್ರವಾದಿ ಮುಹಮ್ಮದ್ (ಸ) ಅದರ ವಕ್ತಾರಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನುಪ್ರವಾದಿ (ಸ) ರ ಸಂದೇಶ ಪ್ರಚಾರ ಅಭಿಯಾನದ ಸಾರ್ವಜನಿಕ ಕಾರ್ಯಕ್ರಮವು ಫೆಬ್ರವರಿ12ರ ಶುಕ್ರವಾರದಂದು ಸಂಜೆ7ಕ್ಕೆ ಉಳ್ಳಾಲದ ಅಬ್ಬಕ್ಕ ಸರ್ಕಲ್‌ನಲ್ಲಿ ಜರಗಲಿರುವುದು. ಈ ಕಾರ್ಯಕ್ರಮದಲ್ಲಿ ಯುನಿವೆ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು ಪ್ರವಾದಿ ಮುಹಮ್ಮದ್ (ಸ) ರ ಮಾದರಿ ಮದೀನ ಎಂಬ ವಿಷಯದಲ್ಲಿ ಬ್ಯಾರಿ ಭಾಷೆಯಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅಭಿಯಾನ ಸಂಚಾಲಕ ಹಾಗೂ ಯುನಿವೆಫ್ ಕಾರ್ಯದರ್ಶಿ ಯು.ಕೆ.ಖಾಲಿದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





