‘ಯುನಿವೆಫ್’ ನಿಂದ ದೇರಳಕಟ್ಟೆಯಲ್ಲಿ ಪ್ರವಾದಿ ಸಂದೇಶ

ಯುನಿವರ್ಸಲ್ ವೆಲ್‌ಫೇರ ಫೋರಂ–ಯುನಿವೆಫ್ ಕರ್ನಾಟಕ ಇದು2016ರ ಜನವರಿ15ರಿಂದ ಫೆಬ್ರವರಿ26ರ ವರೆಗೆಇಸ್ಲಾಮ್ ಒಂದು ಪರಿಹಾರ - ಪ್ರವಾದಿ ಮುಹಮ್ಮದ್ (ಸ) ಅದರ ವಕ್ತಾರಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವಅರಿಯಿರಿ ಮನುಕುಲದ ಪ್ರವಾದಿಯನ್ನುಪ್ರವಾದಿ (ಸ) ರ ಸಂದೇಶ ಪ್ರಚಾರ ಅಭಿಯಾನದ ಸಾರ್ವಜನಿಕ ಕಾರ್ಯಕ್ರಮವು ಜನವರಿ22ರ ಶುಕ್ರವಾರದಂದು ದೇರಳಕಟ್ಟೆಯ ಸಿಟಿ ಗ್ರೌಂಡ್‌ನಲ್ಲಿ ಜರಗಿತು.
ಈ ಸಮಾರಂಭದಲ್ಲಿ ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ಎಂ. ಅಬ್ದುಸ್ಸತ್ತಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯುನಿವೆ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು ಕೇಂದ್ರೀಯ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿ ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದ್ (ಸ) ರವರ ಬೋಧನೆಗಳ ಅನುಷ್ಟಾನದಿಂದ ಜಗತ್ತಿನ ಎಲ್ಲಾ ಪ್ರಸಕ್ತ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಇಸ್ಲಾಮ್ ಎಂದಿಗೂ ಹಿಂಸೆಯನ್ನು ಬೋಧಿಸುವುದಿಲ್ಲ. ಸಮಸ್ಯೆಗಳಿಗೆ ಹಿಂಸಾತ್ಮಕ ಪರಿಹಾರ ಬಯಸುವವರು ಮುಸ್ಲಿಮರಾಗಿರಲು ಸಾಧ್ಯವಿಲ್ಲ. ಶಾಂತಿಯು ಮರೀಚಿಕೆಯಾಗಿರುವ ಇಂದಿನ ಜಗತ್ತಿನಲ್ಲಿ ಪ್ರವಾದಿ (ಸ)ರ ಬೋಧನೆಗಳನ್ನು ವ್ಯಾಪಕಗೊಳಿಸಬೇಕಾದ ಅಗತ್ಯವಿದೆ. ಯುನಿವೆ್ ಆ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಅಭಿಯಾನ ಸಂಚಾಲಕ ಹಾಗೂ ರಫೀಉದ್ದೀನ್ ಕಾರ್ಯದರ್ಶಿ ಯು.ಕೆ.ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೀಮುದ್ದೀನ್ ಕಿರ್‌ಅತ್ ಪಠಿಸಿದರು. ಹುದೈ ಕಾರ್ಯಕ್ರಮ ನಿರೂಪಿಸಿದರು.







