ಫಿತೂರ್ ನಲ್ಲಿರುವ ಇನ್ನೊಬ್ಬ ಖ್ಯಾತ ನಟ ಯಾರು ?

ಮುಂಬೈ , ಫೆ 11: ಶುಕ್ರವಾರ ಬಿಡುಗಡೆಯಾಗುತ್ತಿರುವ ಫಿತೂರ್ ಚಿತ್ರದಲ್ಲಿ ಪ್ರಧಾನ ಪಾತ್ರಗಳಲ್ಲಿರುವ ಆದಿತ್ಯ ರಾಯ್ ಕಪೂರ್ ಹಾಗು ಕತ್ರಿನಾ ಕೈಫ್ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಅವರಿಬ್ಬರ ಚಿತ್ರಗಳು, ಅವರ ಅಭಿಪ್ರಾಯಗಳು, ಚಿತ್ರದ ಕತೆ ಇತ್ಯಾದಿ ಇತ್ಯಾದಿಗಳೆಲ್ಲ ಸಿನಿ ಅಭಿಮಾನಿಗಳ ನಡುವೆ ವಿನಿಮಯವಾಗಿವೆ. ಇನ್ನೊಬ್ಬ ಪ್ರಮುಖ ಪಾತ್ರಧಾರಿ ತಬು ಕುರಿತೂ ಅಲ್ಲಲ್ಲಿ ಕೇಳಿ ಬಂದಿದೆ. ಆದರೆ ಈವರೆಗೆ ಚಿತ್ರದಲ್ಲಿರುವ ಇನ್ನೊಬ್ಬ ನಟನ ಕುರಿತು ಯಾವುದೇ ಗುಟ್ಟು ಹೊರಬಿದ್ದಿಲ್ಲ. ಅದು ಅಜಯ್ ದೇವಗನ್ ! ಹೌದು, ಅಜಯ್ ಈ ಚಿತ್ರದಲ್ಲಿದ್ದಾರೆ ಎಂದು ಬಹುತೇಖರಿಗೆ ಗೊತ್ತೇ ಇಲ್ಲ.
ಚಿತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಆದರೆ ಚಿತ್ರದ ಯಾವುದೇ ಪ್ರಚಾರ ಸಾಮಗ್ರಿಗಳಲ್ಲಿ ಅವರ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಡಲಾಗಿಲ್ಲ. ಕಾಶ್ಮೀರದಲ್ಲಿ ನಡೆಯುವ ಕತೆ ಇರುವ ಈ ಚಿತ್ರವನ್ನು ಪ್ರತಿಭಾವಂತ ನಿರ್ದೇಶಕ ಕೈ ಪೋಚೆ ಖ್ಯಾತಿಯ ಅಭಿಷೇಕ್ ಕಪೂರ್ ನಿರ್ದೇಶಿಸುತ್ತಿದ್ದಾರೆ.
ಚಾರ್ಲ್ಸ್ ಡಿಕನ್ಸ್ ಕಾದಂಬರಿಯಾಧಾರಿತ ಈ ಚಿತ್ರದಲ್ಲಿ ಅನುಭವೀ ನಟ ಅಜಯ್ ದೇವಗನ್ ಹೀರೋ ಆದಿತ್ಯ ಅವರೊಂದಿಗೆ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿದ್ದಾರೆ ಎಂಬುದು ಮಾತ್ರ ಈಗ ತಿಳಿದು ಬಂದಿರುವ ವಿಷಯ . ಯಾವುದಕ್ಕೂ ನಾಳೆ ಚಿತ್ರ ಬಿಡುಗಡೆಯಾಗಲಿದೆ . ನೋಡೋಣ .







