ಸಹೋದರಿಯೊಂದಿಗೆ ಅನೈತಿಕ ಸಂಬಂಧ ಆರೋಪ ; ವ್ಯಕ್ತಿಯ ಥಳಿಸಿ ಹತ್ಯೆ

ಉದಯಪುರ: ರಾಜಸ್ಥಾನದ ರಾಣಿ ಕಸ್ಬಾದ 24ವರ್ಷ ವಯಸ್ಸಿನ ಗೋವಿಂದ್ ಉರುಫ್ ಸುರೇಶ್ ಬಂಜಾರ ಎಂಬಾತನನ್ನು ಸೋಮವಾರ ರಾತ್ರಿ ಲಾಠಿಯಿಂದ ಹೊಡೆದು ಕೊಲ್ಲಲಾಗಿದೆ. ರಣವೀರ್ ಉರುಫ್ ರಾಣಾರಾಮ್ ದಮಾಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅವನು ಗೋವಿಂದನನ್ನು ಕೊಂದಿದ್ದು ತಾನೆಂದು ಆರೋಪವನ್ನು ಒಪ್ಪಿಕೊಂಡಿದ್ದಾನೆ.
ರಣವೀರನ ಮದುವೆಯಾದ ಸಹೋದರಿಯೊಂದಿಗೆ ಮೃತ ಗೋವಿಂದ ಅನೈತಿಕ ಸಂಬಂಧ ಇರಿಸಿಕೊಂಡಿದ್ದ. ಇದಕ್ಕಾಗಿ ರಣಜವೀರ್ ಆಗಾಗ ಗೋವಿಂದನಿಗೆ ಎಚ್ಚರಿಕೆಯನ್ನು ಕೊಡುತ್ತಿದ್ದ. ಸೋಮವಾರ ರಣವೀರನ ಮನೆ ಕಡೆಗೆ ಬಂದಾಗ ಹತ್ತಿರದ ಮೈದಾನವೊಂದಕ್ಕೆ ಎತಿ ್ತಒಯ್ದು ಲಾಠಿಯಿಂದ ಗೋವಿಂದನಿಗೆ ಹೊಡೆಯಲಾಗಿತ್ತು. ಗೋವಿಂದ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದ. ಎಸ್ಪಿ ದೀಪಕ್ ಭಾರ್ಗವ್‌ರು ಗೋವಿಂದನ ಶವ ಮಂಗಳವಾರ ಆಟದ ಮೈದಾನದಲ್ಲಿ ಕಂಡು ಬಂದಿತ್ತು. ಸಿಒ ಬಾಲಿಗುಲಾಬ್ ರಾಠೋಡ್ ಹಾಗೂ ರಾಣಿಯ ಎಸ್‌ಎಚ್‌ಒ ದೇವಿಸಿಂಗ್ ರಾಠೋಡ್‌ರ ತಂಡ ಸ್ಥಳಕ್ಕೆ ತಲುಪಿ ತನಿಖೆ ಮುಂದುವರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Next Story





