ಇದು ಯುದ್ಧ ಘೋಷಣೆಗೆ ಸಮ: ಉತ್ತರ ಕೊರಿಯ
ಇನ್ನು ಕೈಗಾರಿಕ ವಸಾಹತು ಸೇನಾ ನಿಯಂತ್ರಣ ವಲಯ ಉತ್ತರ ಕೊರಿಯದಲ್ಲಿರುವ ತನ್ನ ಕೈಗಾರಿಕಾ ವಸಾಹತನ್ನು ಮುಚ್ಚುವ ದಕ್ಷಿಣ ಕೊರಿಯದ ನಿರ್ಧಾರವನ್ನು ‘‘ಯುದ್ಧ ಘೋಷಣೆ’’ ಎಂಬುದಾಗಿ ಉತ್ತರ ಕೊರಿಯ ಬಣ್ಣಿಸಿದೆ. ಕೈಸಾಂಗ್ ಕೈಗಾರಿಕಾ ವಸಾಹತಿನಲ್ಲಿರುವ ಎಲ್ಲ ದಕ್ಷಿಣ ಕೊರಿಯನ್ನರನ್ನು ಹೊರದಬ್ಬುವುದಾಗಿ ಹೇಳಿರುವ ಅದು, ಕೈಗಾರಿಕಾ ವಸಾಹತನ್ನು ಸೇನಾ ನಿಯಂತ್ರಣ ವಲಯವನ್ನಾಗಿ ಪರಿವರ್ತಿಸುವುದಾಗಿ ಘೋಷಿಸಿದೆ.
‘‘ಉತ್ತರ ಕೊರಿಯದ ಹೈಡ್ರೋಜನ್ ಬಾಂಬ್ ಪರೀಕ್ಷೆ ಮತ್ತು ಕ್ಷಿಪಣಿ ಪರೀಕ್ಷೆಯನ್ನು ಆಕ್ಷೇಪಿಸಿ, ಕೈಗಾರಿಕಾ ವಸಾಹತನ್ನು ಸಂಪೂರ್ಣವಾಗಿ ಮುಚ್ಚುವ ನಿರ್ಧಾರ ಅಕ್ಷಮ್ಯ’’ ಎಂದು ‘ಕೊರಿಯದ ಶಾಂತಿಯುತ ಏಕೀಕರಣಕ್ಕಾಗಿನ ಉತ್ತರ ಕೊರಿಯದ ಸಮಿತಿ’ ಹೇಳಿದೆ.
ಕೈಗಾರಿಕಾ ವಸಾಹತಿನಿಂದ ಹೊರಹೋಗುವಂತೆ ಉತ್ತರ ಕೊರಿಯ ದಕ್ಷಿಣ ಕೊರಿಯನ್ನರಿಗೆ ಗುರುವಾರ ಮಧ್ಯಾಹ್ನದ ವೇಳೆಗೆ ಆದೇಶಿಸಿದೆ. ವೈಯಕ್ತಿಕ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಒಯ್ಯದಂತೆ ಅದು ಅವರಿಗೆ ಸೂಚಿಸಿದೆ.
Next Story





