ಬೆಳ್ತಂಗಡಿ;ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು 13 ಮಂದಿ ನಾಮ ಪತ್ರಗಳು ಹಿಂಪಡೆಯಲಾಗಿದೆ 26 ಮಂದಿ ಅಂತಿಮಕಣದಲ್ಲಿ
ಬೆಳ್ತಂಗಡಿ; ತಾಲೂಕಿನ ಏಳು ಜಿ ಪಂ ಕ್ಷೇತ್ರಗಳಲ್ಲಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು 13 ಮಂದಿ ನಾಮ ಪತ್ರಗಳು ಹಿಂಪಡೆಯಲಾಗಿದ್ದು 26 ಮಂದಿ ಅಭ್ಯರ್ಧಿಗಳು ಅಂತಿಮ ಕಣದಲ್ಲಿದ್ದಾರೆ. ಬಿಜೆಪಿಯ ಹಾಲಿ ಜಿ. ಪಂ ಸದಸ್ಯೆ ತುಳಸಿ ಹಾರಬೆ ಅವರು ಬಂಡಾಯವಾಗಿ ಕುವೆಟ್ಟು ಕ್ಷೇತ್ರದಲ್ಲಿ ಸ್ಪರ್ಧಾಕಣದಲ್ಲಿ ಮುಂದುವರಿದಿದ್ದಾರೆ, ಅಳದಂಗಡಿಯಲ್ಲಿ ಕಾಂಗ್ರೆಸ್ ಮುಖಂಡ ಈಶ್ವರ ಬೈರ ಪಕ್ಷೇತರರಾಗಿ ಕಣದಲ್ಲಿ ಮುಂದುವರಿದಿದ್ದು ಉಳಿದಂತೆ ಬಹುತೇಕ ಬಂಡಾಯಗಳನ್ನು ಶಮನಗೊಳಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
ನಾರಾವಿ ಜಿ.ಪಂ ಕ್ಷೇತ್ರದಲ್ಲಿ ಅಂತಿಮವಾಗಿ ಮೂವರು ಕಣದಲ್ಲಿದ್ದು ಕಾಂಗ್ರೆಸ್ ನಿಂದ ಮಾಜಿ ಜಿ. ಪಂ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಬಿಜೆಪಿಯಿಂದ ತಾ. ಪಂ ಸದಸ್ಯ ಜಯಂತ ಕೋಟ್ಯಾನ್, ನಡುವೆ ನೇರ ಸ್ಪರ್ದೆ ನಡೆಯುತ್ತಿದೆ. ಅಳದಂಗಡಿ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಶೇಖರ ಕುಕ್ಕೇಡಿ, ಬಿಜೆಪಿಯಿಂದ ಸದಾಶಿವ ಕುಮಾರ್, ಜನತಾ ದಳದಿಂದ ವೆಂಕಪ್ಪ, ಪಕ್ಷೇತರರಾಗಿ ಈಶ್ವರ ಬೈರ, ಚೆನ್ನಕೇಶವ, ಶಿವಾನಂದ ಅಂತಿಮ ಕಣದಲ್ಲಿದ್ದಾರೆ. ಲಾಯಿಲ ಕ್ಷೇತ್ರದಲ್ಲಿ ಬಿಜೆಪಿಯಿಂದ ಸೌಮ್ಯಲತಾ ಗೌಡ, ಕಾಂಗ್ರೆಸ್‌ನಿಂದ ಶೋಭಾ ಎನ್ ಗೌಡ, ಸಿಪಿಐಎಂ ನಿಂದ ರೋಹಿಣಿ, ಜನತಾದಳ (ಜಾ) ದಿಂದ ಸಿಂಧೂದೇವಿ, ಸಂಯುಕ್ತ ಜನತಾದಳದಿಂದ ರೂಪಲತಾ ಕಣದಲ್ಲಿದ್ದಾರೆ. ಉಜಿರೆ ಕ್ಷೇತ್ರದಲ್ಲಿ ನೇರ ಸ್ಪರ್ಧೆ ನಡೆಯುತ್ತಿದ್ದು ಕಾಂಗ್ರೆಸ್‌ನಿಂದ ನಮಿತಾ ಕೆ, ಬಿಜೆಪಿಯಿಂದ ಮಂಜುಳಾ ಉಮೇಶ್ ಅಭ್ಯರ್ಧಿಗಳಾಗಿದ್ದಾರೆ. ಧರ್ಮಸ್ಥಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಿ.ಪಂ ಮಾಜಿ ಅಧ್ಯಕ್ಷ ಕೊರಗಪ್ಪ ನ್ಯಾಕ, ಕಾಂಗ್ರೆಸ್‌ನಿಂದ ಬಿ ರಮೇಶ್, ಸಿಪಿಐಎಂ ನಿಂದ ವಿಠಲ ಮಲೆಕುಡಿಯ, ಪಕ್ಷೇತರರಾಗಿ ನಾರಾಯಣ ಮಲೆಕುಡಿಯ ಕಣದಲ್ಲಿದ್ದಾರೆ. ಕಣಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೆ.ಕೆ ಶಾಹುಲ್ ಹಮೀದ್, ಬಿಜೆಪಿಯಿಂದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಸಂಯುಕ್ತ ಜನತಾದಳದಿಂದ ವೆಂಕಟೇಶ್ ಬೆಂಡೆ ಕಣದಲ್ಲಿದ್ದಾರೆ. ಕುವೆಟ್ಟು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಶರಲ್ ನೊರೋನ್ಹ, ಬಿಜೆಪಿಯಿಂದ ತಾ. ಪಂ ಮಾಜಿ ಅಧ್ಯಕ್ಷೆ ಮಮತಾ ಶೆಟ್ಟಿ, ಪಕ್ಷೇತರರಾಗಿ ಹಾಲಿ ಜಿ.ಪಂ ಸದಸ್ಯೆ ತುಳಸಿ ಹಾರಬೆ, ಸಂಯುಕ್ತ ಜನತಾದಳದಿಂದ ಲಕ್ಷ್ಮೀ. ಪಿ ರಾವ್ ಕಣದಲ್ಲಿದ್ದಾರೆ.







