ಫೆ.29ರಿಂದ ಮಾ.5ರವರೆಗೆ ವಿಧಾನಸಭಾ ಅಧಿವೇಶನ
ಬೆಂಗಳೂರು, ಫೆ. 11: ಹದಿನಾಲ್ಕನೇ ವಿಧಾನ ಸಭೆಯ ಒಂಬತ್ತನೆ ಅಧಿವೇಶನದ ಉಪವೇಶನವು ಫೆ.29ರ ಅಪರಾಹ್ನ 12ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭಾ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ. ರಾಜ್ಯಪಾಲ ವಜುಭಾಯಿ ರುಢಾಭಾಯಿ ವಾಲಾ ಅವರು ಅಂದು ವಿಧಾನಮಂಡಲ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಾ.5ರ ವರೆಗೆ ನಡೆಯಲಿರುವ ಈ ಸಮಾವೇಶನದಲ್ಲಿ ಮಾ.3ರಂದು ಖಾಸಗಿ ಕಲಾಪಗಳು ಹಾಗೂ ಉಳಿದೆಲ್ಲಾ ದಿನಗಳು ಸರಕಾರಿ ಕಲಾಪಗಳು ನಡೆಯಲಿವೆ ಎಂದು ವಿಧಾನ ಮಂಡಲ ಅಧಿಕೃತ ಪ್ರಕಟಣೆ ತಿಳಿಸಿದೆ.
Next Story





