ಫೆ.13ರ ಉಪ ಚುನಾವಣೆ: ಮತದಾನೋತ್ತರ ಸಮೀಕ್ಷೆ ನಿಷೇಧ
ಬೆಂಗಳೂರು, ಫೆ. 11: ದೇವದುರ್ಗ, ಬೀದರ್ ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳಿಗೆ ಫೆ.13ರ ಶನಿವಾರ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ, ಮತದಾನ ನಡೆಯುವ ಬೆಳಗ್ಗೆ 7ಗಂಟೆಯಿಂದ ಸಂಜೆ 5:30ರ ಅವಧಿಯಲ್ಲಿ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಮತದಾನೋತ್ತರ ಸಮೀಕ್ಷೆಯನ್ನು ಪ್ರಚುರ ಪಡಿಸುವುದು ಅಥವಾ ಪ್ರಸಾರ ಮಾಡುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ.
ಚುನಾವಣೆಗೆ ಸಂಬಂಧಿಸಿದಂತೆ ಅಭಿಪ್ರಾಯ ಅಥವಾ ಸಮೀಕ್ಷೆಯ ಫಲಿತಾಂಶವನ್ನು ಒಳಗೊಂಡಂತೆ ಯಾವುದೇ ಚುನಾವಣಾ ಸಂದೇಶವನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರದರ್ಶಿಸುವುದೂ ಜನಪ್ರತಿನಿಧಿ ಕಾಯ್ದೆ 1951ರ ಪರಿಚ್ಛೇಧ 126(1)(ಬಿ)ರಂತೆ ಚುನಾವಣೆ ಮುಕ್ತಾಯಗೊಳ್ಳುವ ಅವಧಿಯ 48ಗಂಟೆಗಳ ಮುನ್ನವೂ ನಿಷೇಧಿಸಲಾಗಿದೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.
Next Story





