ಅಫ್ಘಾನ್: ಸಹೋದ್ಯೋಗಿ ಗುಂಡಿಗೆ 4 ಪೊಲೀಸ್ ಬಲಿ
ಕಂದಹಾರ್, ಫೆ. 11: ಅಫ್ಘಾನಿಸ್ತಾನದ ದಕ್ಷಿಣದ ರಾಜ್ಯ ಕಂದಹಾರ್‌ನಲ್ಲಿ ಓರ್ವ ಅಫ್ಘಾನ್ ಪೊಲೀಸ್ ತನ್ನ ಸಹೋದ್ಯೋಗಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದಾಗ ನಾಲ್ವರು ಪೊಲೀಸರು ಮೃತಪಟ್ಟಿದ್ದಾರೆ ಹಾಗೂ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.
ಘಟನೆ ಬುಧವಾರ ರಾತ್ರಿ ನಡೆದಿದ್ದು, ದುಷ್ಕರ್ಮಿ ಪೊಲೀಸ್ ವ್ಯಕ್ತಿಯನ್ನು ಇನ್ನೋರ್ವ ಪೊಲೀಸ್ ಗುಂಡು ಹಾರಿಸಿ ಕೊಂದರು ಎಂದು ರಾಜ್ಯ ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.
ದಾಳಿಯ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ.
Next Story





