ಹನುಮಂತಪ್ಪ ನಿಧನಕ್ಕೆ ಕೆಎಸ್ಸಾರ್ಟಿಸಿ ಸಿಬ್ಬಂದಿ ಸಂತಾಪ
ಬೆಂಗಳೂರು,ಫೆ.11: ಸಿಯಾಚಿನ್‌ನಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟಿರುವ ಯೋಧರಿಗೆ ಕೆಎಸ್ಸಾರ್ಟಿಸಿ ಸಿಬ್ಬಂದಿ ಸಂತಾಪವನ್ನು ಸೂಚಿಸಿದ್ದಾರೆ.
ದುರಂತದಲ್ಲಿ ಸಾವನ್ನಪ್ಪಿರುವ ಕರ್ನಾಟಕದ ಹಾಸನ ಜಿಲ್ಲೆಯ ನಾಗೇಶ್, ಮೈಸೂರು ಜಿಲ್ಲೆಯ ಮಹೇಶ್ ಹಾಗೂ ಬದುಕುಳಿಯುವ ಭರವಸೆ ಮೂಡಿಸಿ ಗುರುವಾರ ಹುತಾತ್ಮರಾದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಹಾಗೂ ದೇಶದ ಇನ್ನಿತರ ಯೋಧರು ದೇಶಕ್ಕಾಗಿ ನಿರಂತರ ಶ್ರಮಿಸಿದ್ದಾರೆ. ಎಲ್ಲ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿ ಬರಲಿ ಎಂದು ಕೆಎಸ್ಸಾರ್ಟಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
Next Story





