ನೈಜೀರಿಯ: ಅವಳಿ ಸ್ಫೋಟಗಳಿಗೆ 35 ಬಲಿ
ಮೈದುಗುರಿ (ನೈಜೀರಿಯ), ಫೆ. 11: ಈಶಾನ್ಯ ನೈಜೀರಿಯದಲ್ಲಿ ಬೊಕೊ ಹರಾಂ ಉಗ್ರರಿಗೆ ಹೆದರಿ ಪಲಾಯನಗೈದವರಿಗಾಗಿ ಸ್ಥಾಪಿಸಲಾದ ಶಿಬಿರವೊಂದರಲ್ಲಿ ಇಬ್ಬರು ಮಹಿಳಾ ಆತ್ಮಹತ್ಯಾ ಬಾಂಬರ್‌ಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡಾಗ ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ ಎಂದು ಸರಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
ಮೈದುಗುರಿಯಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ದಿಕ್ವ ಶಿಬಿರದಲ್ಲಿ ಮಂಗಳವಾರ ಬೆಳಗ್ಗೆ ಎರಡು ಬಾಂಬ್‌ಗಳು ಸ್ಫೋಟಿಸಿದವು ಎಂದು ಶಿಬಿರಗಳ ಉಸ್ತುವಾರಿ ಅಧಿಕಾರಿ ಹೇಳಿದರು.
Next Story





