ಐಎಫ್‌ಎಸ್ ಫಲಿತಾಂಶ: 110 ಅಭ್ಯರ್ಥಿಗಳು ಉತ್ತೀರ್ಣ
ಹೊಸದಿಲ್ಲಿ,ಫೆ.11: ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಫಲಿತಾಂಶವನ್ನು ಭಾರತೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಗುರುವಾರ ಪ್ರಕಟಿಸಿದ್ದು, 110 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಆಯ್ಕೆಯಾದ ಅಭ್ಯರ್ಥಿಗಳಲ್ಲಿ 49 ಮಂದಿ ಸಾಮಾನ್ಯಶ್ರೇಣಿ, 35 ಮಂದಿ ಒಬಿಸಿ, 18 ಮಂದಿ ಪರಿಶಿಷ್ಟ ಜಾತಿ ಹಾಗೂ 8 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರೆಂದು ಆಯೋಗದ ಪ್ರಕಟಣೆ ತಿಳಿಸಿದೆ.
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್)ಯ ಮುಖ್ಯ ಪರೀಕ್ಷೆಯನ್ನು 2015ರ ನವೆಂಬರ್ ಹಾಗೂ ಡಿಸೆಂಬರ್‌ಗಳಲ್ಲಿ ನಡೆದಿತ್ತು. ಆನಂತರ ಈ ವರ್ಷದ ಫೆಬ್ರವರಿಯಲ್ಲಿ ವ್ಯಕ್ತಿತ್ವ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.
ಅಭ್ಯರ್ಥಿಗಳು ತಮ್ಮ ಪರೀಕ್ಷೆ ಅಥವಾ ನೇಮಕಾತಿಗೆ ಸಂಬಂಧಿಸಿ, ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕೆಲಸದ ದಿನಗಳಲ್ಲಿ, 011-23385271,23381125, 23098543 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
www.upsc.gov.in
ಅಭ್ಯರ್ಥಿಗಳ ಅಂಕಪಟ್ಟಿಯು ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ ನಲ್ಲಿ, ಫಲಿತಾಂಶ ಪ್ರಕಟಣೆಯ ದಿನಾಂಕದ 15 ದಿನಗಳೊಳಗೆ ಲಭ್ಯವಿರುವುದು ಎಂದು ಮೂಲಗಳು ತಿಳಿಸಿವೆ.





