ಕೇರಳಿಯರಿಗೆ ಭಾರೀ ಕೊಡುಗೆ ನೀಡಿದ ಮುಖ್ಯಮಂತ್ರಿ ಉಮ್ಮನ್ ಚಾಂಡಿಯ ಕೊನೆ ಬಜೆಟ್

ತಿರುವನಂತಪುರಂ: ಸೋಲಾರ್- ಬಾರ್‌ಲಂಚ ಹಗರಣಗಳಲ್ಲಿ ಮುಳುಗೆದ್ದಿರುವ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಯವರ ಕೊನೆಯ ಬಜೆಟ್ ನಿಯಮಸಭೆ(ಕೇರಳ ವಿಧಾನ ಸಭೆ)ಯಲ್ಲಿ ಆರಂಭವಾಗಿದೆ. ಪ್ರತಿಪಕ್ಷಗಳು ಅತ್ತ ಗಲಾಟೆಗಿಳಿದಿದ್ದರೆ ಇತ್ತ ಏಕಾಗ್ರ ಚಿತ್ತನಾಗಿ ಚಾಂಡಿ ಬಜೆಟ್‌ನಲ್ಲಿ ಭಾರೀ ಘೋಷಣೆಗಿಳಿದಿದ್ದಾರೆ. ಮುಲ್ಲಪೆರಿಯಾರ್‌ನಲ್ಲಿ ಹೊಸ ಅಣೆಕಟ್ಟು ನಿರ್ಮಾಣಕ್ಕೆ 100ಕೋಟಿ ರೂ. ರಬ್ಬರ್‌ಗೆ 150ರೂ. ಲಭಿಸಲಿಕ್ಕಾಗಿ 500ಕೋಟಿ ರೂ. ಅತಿವೇಗದ ರೈಲು ಸಾರ್ವಜನಿಕ ಕ್ಷೇತ್ರದಲ್ಲಿ ಜಾರಿ, ತಿರುವನಂತಪುರದಲ್ಲಿ ಸೋಲಾರ್‌ಸಿಟಿ; ಕೃಷಿಕ್ಷೇತ್ರಕ್ಕೆ ಭಾರೀ ಕೊಡುಗೆ, ಕೇಂದ್ರ ಉದ್ಯೋಗ ಖಾತರಿ ಯೋಜನೆಗೂ ಮೊತ್ತ ಕಾದಿರಿಸಲಾಗಿದೆ. ಹೀಗೆ ನಿರ್ಗಮನ ಸರಕಾರದ ಕೊನೆಯ ಬಜೆಟ್‌ನಲ್ಲಿ ಅಪರಿಮಿತ ಕೊಡುಗೆಗಳನ್ನು ಮುಖ್ಯಮಂತ್ರಿ ಚಾಂಡಿ ಜನರ ಮುಂದಿರಿಸಿದ್ದಾರೆ. ತನಗೆ 2016 ಮತ್ತು 2017ರ ಬಜೆಟನ್ನು ಪ್ರಸ್ತುತ ಪಡಿಸಲು ಸಂತೋಷವಾಗಿದೆ ಎಂದ ಚಾಂಡಿ ಕಳೆದ ಐದು ವರ್ಷಗಳಲ್ಲಿ ಯುಡಿಎಫ್ ಸರಕಾರವನ್ನು ಬೆಂಬಲಿಸಿದ ಜನರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಖಚಿತಗೊಳಿಸುವತ್ತ ಹೆಜ್ಜೆ ಇರಿಸಲಾಗಿದೆ. ಅಭಿವೃದ್ಧಿಯಲ್ಲಿ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಲಾಗಿದೆ ಎಂದ ಚಾಂಡಿ ತನ್ನ ಸರಕಾರದ ಬೆನ್ನು ತಟ್ಟಿದ್ದಾರೆ.
ಬಜೆಟ್‌ನ್ನು ವಿರೋಧಿಸಿ ವಿಪಕ್ಷಗಳು ವಿಧಾನಸಭೆಯಲ್ಲಿ ಪ್ಲೇಕಾರ್ಡ್ ಹಿಡಿದು ಘೋಷಣೆ ಕೂಗಿದವು. ಬಜೆಟ್ ಸೋರಿಕೆಯಾಗಿದೆ ಎಂದು ಪ್ರತಿಪಕ್ಷ ವಾದಿಸಿದವು. ಬಜೆಟ್‌ನಲ್ಲಿ ಸೇರಿಸಲಾದ ಲೆಕ್ಕಗಳನ್ನು ಪ್ರತಿಪಕ್ಷ ಪ್ರದರ್ಶಿಸಿದವು. ಬಜೆಟ್‌ನಲ್ಲಿ ಹಣದ ಕೊರತೆ ಇದೆ ಎಂದು ಅದು ವಾದಿಸಿ ಕೆಲವು ಲೆಕ್ಕಗಳನ್ನು ಬಹಿರಂಗ ಪಡಿಸಿವೆ. ಪ್ರತಿಪಕ್ಷ ಹೊರಬಿಟ್ಟ ಲೆಕ್ಕದಂತೆ ಹಣಕಮ್ಮಿ ಅಥವಾ ಕೊರತೆ 19971ಕೋಟಿ ರೂ. ರೆವನ್ಯೂ ಕೊರತೆ 84092 ಕೋಟಿ ರೂ. ಯೋಜನಾ ವೆಚ್ಚ 23583ಕೋಟಿರೂ. ರೆವನ್ಯೂ ಖರ್ಚು 99990 ಕೋಟಿರೂ. ಆಗಿದೆ.
ಆದರೆ ಮುಖ್ಯಮಂತ್ರಿ ಸರಕಾರಕ್ಕ್ಕೆಎಲ್ಲ ವಿಭಾಗಗಳಿಗೂ ನೆರವು ತಲುಪಿಸಲು ಸಾಧ್ಯವಾಗಿದೆ. ಸಾಮಾಜಿಕ ನ್ಯಾಯ ಖಾತೆ, ಮುಖ್ಯಮಂತ್ರಿಯ ಜನಸಂಪರ್ಕ ಕಾರ್ಯ ಕ್ರಮ ಎಂಬಿವುಗಳ ಮೂಲಕ ರೋಗಿಗಳಿಗೆ ಸಾಂತ್ವನ ನೀಡಲಾಗಿದೆ ಎಂದು ಮುಖ್ಯ ಮಂತ್ರಿ ಬಜೆಟ್ ಸತ್ರದಲ್ಲಿ ಘೋಷಿಸಿದ್ದಾರೆ. ಹಿಂದಿನ ಹಣಕಾಸು ಸಚಿವ ಕೆ.ಎಂ. ಮಾಣಿಯವರನ್ನು ಅಭಿನಂದಿಸಿ ಬಜೆಟ್ ಭಾಷಣವನ್ನು ಉಮ್ಮನ್ ಚಾಂಡಿ ಪ್ರಾರಂಭಿಸಿದ್ದಾರೆ. ಮಾಣಿಯವರ ಆರ್ಥಿಕ ತಜ್ಞತೆ ಕೇರಳಕ್ಕೆ ಸಹಕಾರಿಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ಸಾರ್ವಜನಿಕ ವಿತರಣೆ ವ್ಯವಸ್ಥೆ ಇನ್ನಷ್ಟು ಬಲಪಡಿಸಬೇಕಾಗಿದೆ. 24000ಕೋಟಿ ರೂ. ವಾರ್ಷಿಕ ಯೋಜನೆಯನ್ನು ಜಾರಿಗೊಳಿಸಬೇಕಾಗಿದೆ ಎಂದುಮುಖ್ಯಮಂತ್ರಿ ಈ ಸಂದರ್ಭದಲ್ಲಿ ಸೂಚಿಸಿದ್ದಾರೆ.







