ಕಾರ್ಕಳ : ಹುಲಿಯೋಜನೆ ಬಗ್ಗೆ ಯಾಕೆ ಮೌನ ?: ಭಂಡಾರಿ

ಕಾರ್ಕಳ : ಕೇಂದ್ರದಲ್ಲಿ ಯುಪಿಎ ಸರಕಾರ ಹುಲಿ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ ಎಂದು ಬೊಬ್ಬಿಟ್ಟು ಪ್ರತಿಭಟಿಸಿದ ಬಿಜೆಪಿಗರು, ಪ್ರಸ್ತುತ ಅವರದ್ದೇ ಕೇಂದ್ರ ಸರಕಾರ ಆ ಯೋಜನೆಯ ಅನುಷ್ಟಾನಗೊಳಿಸಲು ಮುಂದಾಗಿರುವ ಬಗ್ಗೆ ಮೌನ ? ಎಂದು ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಹೇಳಿದ್ದಾರೆ.
ಅವರು ಜಿ.ಪಂ.ತಾ.ಪಂ. ಚುನಾವಣೆಯ ಪ್ರಯುಕ್ತ ಶಿರ್ಲಾಲಿನಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಎನ್. ಕೋಟ್ಯಾನ್, ಜಿ.ಪಂ. ಅಭ್ಯರ್ಥಿ ಮಂಜುನಾಥ ಪೂಜಾರಿ, ಅಜೆಕಾರು ತಾ.ಪಂ. ಅಭ್ಯರ್ಥಿ ಪ್ರಕಾಶ್ ಶೆಟ್ಟಿ, ಶಿರ್ಲಾಲು ಪಂ. ಅಧ್ಯಕ್ಷ ರಾಜು ಶೆಟ್ಟಿ, ಡಾ: ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ತಾ.ಪಂ.ಸದಸ್ಯ ಸುಜಿತ್ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Next Story





