ಬೆಂಗಳೂರಿನಲ್ಲಿ ನಡೆಯಲಿರುವ ಮರಳಿ ಬಾ ಪರಂಪರೆಗೆ ಡಿವಿಜನ್ ಕಾನ್ಫರೆನ್ಸ್‌ನ ಚಾಲನ ಸಮಾವೇಶ

ಬೆಂಗಳೂರು. ಫೆ, 12: ಎಸ್ಸೆಸ್ಸೆಫ್ ಬೆಂಗಳೂರು ಜಯನಗರ ಡಿವಿಜನ್ ವತಿಯಿಂದ ಏಪ್ರಿಲ್ 15 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮರಳಿ ಬಾ ಪರಂಪರೆಗೆ ಡಿವಿಜನ್ ಕಾನ್ಫರೆನ್ಸ್‌ನ ಚಾಲನ ಸಮಾವೇಶವು ಇತ್ತೀಚೆಗೆ ಬಿಳೇಕ ಹಳ್ಳಿ ಯಲ್ಲಿ ಎಸ್ಸೆಸ್ಸೆಫ್ ಬೆಂಗಳೂರು ಜಯನಗರ ಡಿವಿಜನ್ ಅಧ್ಯಕ್ಷರಾದ ರಯೀಸ್ ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್‌ಎಮ್‌ಎ ಬೆಂಗಳೂರು ಜಿಲ್ಲಾಧ್ಯಕ್ಷರಾದ ಸಿ.ಪಿ ಶುಕೂರು ಹಾಜಿ ಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಮ್‌ಒಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್‌ಎಸ್‌ಆರ್ ಝುಬೈರ್ ಮೌಲವಿಯವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಬೆಂಗಳೂರು ಜಯನಗರ ಡಿವಿಜನ್ ಪ್ರ.ಕಾರ್ಯದರ್ಶಿ ಶಿಹಾಬುದ್ದೀನ್ ಮಡಿವಾಳ, ಉಪಾಧ್ಯಕ್ಷರಾದ ಸಲೀಮ್ ನಈಮಿ, ಲತೀಫ್ ನಈಮಿ, ಸ್ವಾಲಿಹ್, ಅಫ್ಝಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.



Next Story







